ನವದೆಹಲಿ: 2018ನೇ ಸಾಲಿನ ನ್ಯಾಷನಲ್ ಫಿಲ್ಮಂ ಅವಾರ್ಡ್ ಪುರಸ್ಕಾರ ಘೋಷಣೆ ಮಾಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡು ಜನಮನ ಗೆದ್ದಿರುವ ಬಾಲಿವುಡ್ನ ಅಂಧಾಧುನ್ಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ನೀಡಲಾಗಿದೆ.
2018ರ ಅಕ್ಟೋಬರ್ 5ರಂದು ದೇಶಾದ್ಯಂತ ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ತಬು, ರಾಧಿಕಾ ಆಪ್ಟೆ ಆ್ಯಕ್ಟ್ ಮಾಡಿದ್ದರು. ಕ್ರೈಂ ಕಥೆಯನ್ನೊಳಗೊಂಡಿದ್ದ ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಪಿಯಾನೋ ಕಲಾವಿದರಾಗಿ ನಟನೆ ಮಾಡಿದ್ದರು. ಈ ಸಿನಿಮಾಗೆ ಮತ್ತೊಂದು ಪ್ರಶಸ್ತಿ ಕೂಡ ಒಲಿದು ಬಂದಿದೆ. ಬೆಸ್ಟ್ ನಾನ್ ಫಿಚರ್ ಪ್ರಶಸ್ತಿ ಕೂಡ ಇದೇ ಚಿತ್ರಕ್ಕೆ ನೀಡಲಾಗಿದೆ.
- " class="align-text-top noRightClick twitterSection" data="">
ಇನ್ನು ಅಂಧಾಧುನ್ ಚಿತ್ರದಲ್ಲಿ ನಟನೆ ಮಾಡಿರುವ ಆಯುಷ್ಮಾನ್ ಖುರಾನ್ ಹಾಗೂ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ನಟನೆ ಮಾಡಿರುವ ವಿಕ್ಕಿ ಕೌಶಾಲ್ಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ನೀಡಲಾಗಿದೆ. ಇದರ ಜತೆಗೆ ಮಹಾಂತಿ ಚಿತ್ರದಲ್ಲಿ ನಟನೆ ಮಾಡಿರುವ ಕೀರ್ತಿ ಸುರೇಶ್ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಗಿದೆ. ಜತಗೆ ಬೆಸ್ಟ್ ತೆಲಗು ಮೂವಿ ಎಂಬ ಪ್ರಶಸ್ತಿ ಸಹ ನೀಡಲಾಗಿದೆ. ಪದ್ಮಾವತ್ ಚಿತ್ರ ಮೂರು ಪ್ರಶಸ್ತಿ ಪಡೆದುಕೊಂಡಿದ್ದು, ಚಿತ್ರದ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿಗೆ ಬೆಸ್ಟ್ ಮ್ಯೂಸಿಕ್ ಹಾಗೂ ನೃತ್ಯ ಸಂಯೋಜನೆ ಪ್ರಶಸ್ತಿ ನೀಡಲಾಗಿದೆ.
ಅಕ್ಷಯ್ ಕುಮಾರ್ ನಟನೆಯ ಪಾಡ್ಮ್ಯಾನ್ಗೆ ಸಾಮಾಜಿಕ ಸಮಸ್ಯೆಗಳ ಅತ್ಯುತ್ತಮ ಚಿತ್ರ, ಕನ್ನಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಸಗೊಡ ಚಿತ್ರಕ್ಕೆ ಬೆಸ್ಟ್ ಮಕ್ಕಳ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಗಳ ವಿಭಾಗ ಮತ್ತು ಚಲನಚಿತ್ರಗಳ ವಿವರ
- ಅತ್ಯುತ್ತಮ ಹಿಂದಿ ಚಿತ್ರ- ಅಂಧಾಧುನ್
- ಅತ್ಯುತ್ತಮ ಮಲಯಾಳಂ ಚಿತ್ರ- ಸುಡಾನಿ ಫ್ರಂ ನೈಜೀರಿಯಾ
- ಅತ್ಯುತ್ತಮ ತೆಲುಗು ಚಿತ್ರ- ಮಹಾನಟಿ
- ಅತ್ಯುತ್ತಮ ಕನ್ನಡ ಚಿತ್ರ- ನಾತಿಚರಾಮಿ
- ಅತ್ಯುತ್ತಮ ಕೊಂಕಣಿ ಚಿತ್ರ- ಅಮೊರಿ
- ಅತ್ಯುತ್ತಮ ತಮಿಳು ಚಿತ್ರ- ಬಾರಂ
- ಅತ್ಯುತ್ತಮ ಸಾಹಸ ಚಿತ್ರ- ಕೆಜಿಎಫ್
- ಅತ್ಯುತ್ತಮ ಕೊರಿಯಾಗ್ರಫಿ- ಪದ್ಮಾವತ್
- ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್- AWE (ತೆಲುಗು), ಕೆಜಿಎಫ್(ಕನ್ನಡ)
- ಅತ್ಯುತ್ತಮ ಸಾಹಿತ್ಯ- ನಾತಿಚರಾಮಿ (ಮಾಯಾವಿ ಮನವೇ)
- ಅತ್ಯುತ್ತಮ ಸಂಗೀತ ನಿರ್ದೇಶಕ- ಸಂಜಯ್ ಲೀಲಾ ಬನ್ಸಾಲಿ ( ಪದ್ಮಾವತ್)
- ಅತ್ಯುತ್ತಮ ಹಿನ್ನೆಲೆ ಸಂಗೀತ- ಉರಿ
- ಅತ್ಯುತ್ತಮ ಪ್ರಸಾದನ- AWE-ತೆಲುಗು (ರಂಜಿತ್)
- ಪ್ರೊಡಕ್ಷನ್ ಡಿಸೈನ್-ಕಮ್ಮರ ಸಂಭವಂ (ಮಲಯಾಳಂ)
- ಅತ್ಯುತ್ತಮ ಸಂಕಲನ-ನಾತಿಚರಾಮಿ
- ಅತ್ಯುತ್ತಮ ಚಿತ್ರಕತೆ- ಚಿ ಲಾ ಸೌ (ತೆಲುಗು)
- ಅತ್ಯುತ್ತಮ ಛಾಯಾಗ್ರಹಣ- ಉಲ್ಲು
- ಅತ್ಯುತ್ತಮ ಗಾಯಕಿ - ಬಿಂಧು ಮಾಧವಿ (ನಾತಿಚರಾಮಿ)
- ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಪದ್ಮಾವತ್)
- ಅತ್ಯುತ್ತಮ ನಟ- ಆಯುಷ್ಮಾನ್ ಖುರಾನಾ (ಅಂಧಾದೂನ್), ವಿಕ್ಕಿ ಕೌಶಲ್ (ಉರಿ)
- ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ಮಹಾನಟಿ)
- ಅತ್ಯುತ್ತಮ ನಿರ್ದೇಶನ- ಆದಿತ್ಯ ಧರ್ (ಉರಿ)