ಕಳೆದ ಎರಡು ವಾರಗಳು ತಲಾ ಆರು ಸಿನಿಮಾಗಳು ಬಿಡುಗಡೆ ಆಗಿದ್ದು, ಈ ವಾರ ಕೂಡಾ ಮತ್ತೆ ಆರು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ಕಳೆದ ವಾರ ಬಿಡುಗಡೆಯಾದ ಯಾವ ಸಿನಿಮಾಗಳು ಥಿಯೇಟರ್ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿಲ್ಲ.
![kannada movies](https://etvbharatimages.akamaized.net/etvbharat/images/2724511_sandalwood.jpg)
ಈಗಾಗಲೇ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣೆ ಮೇಲೆ ಎಲ್ಲರ ಚಿತ್ತ ನೆಟ್ಟಿರುವಾಗ ಜನರು ಸಿನಿಮಾ ಕಡೆ ಬರುವುದು ಕಡಿಮೆ. ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗುವುದರೊಳಗೆ ನಮ್ಮ ಸಿನಿಮಾ ಬಿಡುಗಡೆ ಮಾಡಿಬಿಡೋಣ ಅಂತ ಎಲ್ಲಾ ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಉದ್ಘರ್ಷ, ಮಿಸ್ಸಿಂಗ್ ಬಾಯ್, ಚಾಣಾಕ್ಷ, ಬದ್ರಿ ವರ್ಸಸ್ ಮಧುಮತಿ, ಪ್ರತ್ಯಂಗಿರ ಅಥರ್ವಣ, ಅಡಚಣೆಗಾಗಿ ಕ್ಷಮಿಸಿ ಮಾರ್ಚ್ 22ರಂದು ಬಿಡುಗಡೆಯಾಗುತ್ತಿರುವ ಸಿನಿಮಾಗಳು.
ಮಾರ್ಚ್, ಏಪ್ರಿಲ್ನಲ್ಲಿ ಮಕ್ಕಳಿಗೆ ಪರೀಕ್ಷೆ ಸಮಯ. ಇನ್ನು ಯುವಕರೂ ತಾವು ಚುನಾವಣೆ ಪ್ರಚಾರಕ್ಕೆ ಹೋದರೆ ಸಿನಿಮಾ ನೋಡುವುದು ಅಷ್ಟಕ್ಕಷ್ಟೇ. ಮಹಿಳೆಯರು ಹಾಗೂ ಹಿರಿಯರಿಗೆ ಟಿವಿ ಎಂಬ ಕಾಯಂ ಸಂಗಾತಿ ಇದೆ. ಹೀಗಿದ್ದ ಮೇಲೆ ನಿಜಕ್ಕೂ ಈಗ ಬಿಡುಗಡೆಯಾಗುವ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುವುದಾ ಎಂಬ ಪ್ರಶ್ನೆ ಕಾಡತೊಡಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಇದರ ಬಗ್ಗೆ ಗಮನ ಹರಿಸಿ ಕಾಯಂ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ.