ಈ ವಾರ (ಮಾರ್ಚ್ ತಿಂಗಳ ಎರಡನೇ ವಾರ) ಕನ್ನಡದಲ್ಲಿ ಆರು ಸಿನಿಮಗಳು ಬಿಡುಗಡೆ ಆಗುತ್ತಿವೆ. ಇಂದು ನರಗುಂದ ಬಂಡಾಯ ಹಾಗೂ ಶಿವಾರ್ಜುನ ಸಿನಿಮಾಗಳು ತೆರೆಗೆ ಬರುತ್ತಿವೆ. ಇನ್ನು ನಾಳೆ 5 ಅಡಿ 7 ಅಂಗುಲ, ಅಂಬಾನಿ ಪುತ್ರ, ನಂ ಕಥೆ ನಿಮ್ ಜೊತೆ ಮತ್ತು ಹುಲಿದುರ್ಗ ಚಿತ್ರಗಳು ರಿಲೀಸ್ ಆಗುತ್ತಿವೆ.
ಇಂದೇ ಬಿಡುಗಡೆ ನರಗುಂದ ಬಂಡಾಯ
ನಾಗೇಂದ್ರ ಮಾಗಡಿ ಪಾಂಡು ಚಿತ್ರಕಥೆ ಹಾಗೂ ನಿರ್ದೇಶನ ಮಾಡಿರುವ ನರಗುಂದ ಬಂಡಾಯ ಸಿನಿಮಾ ಇಂದು ತೆರೆಗೆ ಬರುತ್ತಿದೆ. 1980 ನಡೆದ ನೈಜ ಕಥೆ ಆಧಾರಿತ ಸಿನಿಮಾ ಇದಾಗಿದ್ದು, ರೈತರು ತೆರಿಗೆ ಕಟ್ಟುವ ವಿಚಾರದಲ್ಲಿ ಬಂಡಾಯ ಮಾಡಿ ಸಿಡಿದೇವ ಕಥೆ ಇದರಲ್ಲಿದೆ. ಚಿತ್ರದಲ್ಲಿ ಶುಭಾ ಪೂಂಜಾ, ಅವಿನಾಶ್, ಸಾಧು ಕೋಕಿಲ, ಭವ್ಯ, ಶಿವಕುಮಾರ್, ರವಿ ಚೇತನ್ ಸೇರಿದಂತೆ ಹಲವರಿದ್ದಾರೆ.
ಶಿವಾರ್ಜುನನ ಆರ್ಭಟ
ಪಕ್ಕ ಆಕ್ಷನ್ ಮಸಾಲ ಚಿತ್ರವಾಗಿರುವ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರ ಇಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಚಿರುಗೆ ಅಮೃತ ಅಯ್ಯಂಗಾರ್, ಅಕ್ಷತ ಹಾಗೂ ಅಕ್ಷಿತ ಜೋಡಿಯಾಗಿ ನಟಿಸಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಜೊತೆ ಹಾಸ್ಯ ಸನ್ನಿವೇಶಗಳು ಇವೆ. ಚಿತ್ರಕ್ಕೆ ಶಿವ ತೇಜಸ್ ನಿರ್ದೇಶನವಿದ್ದು, ಸುರಾಗ್ ಸಂಗೀತ ನೀಡಿದ್ದಾರೆ.
ಪೋಷಕ ಪಾತ್ರಗಳಲ್ಲಿ ಕಿಶೋರ್, ತಾರಾ ಅನುರಾಧ, ಮಾಸ್ಟೆರ್ ಶ್ರೀ ಕೃಷ್ಣ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧು ಕೋಕಿಲ, ರವಿ ಕಿಶನ್ ಸೇರಿದಂತೆ ಹಲವರಿದ್ದಾರೆ.