ETV Bharat / sitara

ಗೀತಾ, ಕಿಸ್ ಸೇರಿ ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ - ಪ್ರಯಾಗ ಮಾರ್ಟಿನ್

ಕಳೆದ ವಾರ 2 ಕನ್ನಡ ಸಿನಿಮಾಗಳು ತೆರೆ ಕಂಡರೆ ಈ ಶುಕ್ರವಾರ ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗೀತಾ, ಆಟಕ್ಕುಂಟು ಲೆಕ್ಕಕ್ಕಿಲ್ಲ, ನವರಾತ್ರಿ ಹಾಗೂ ಕಿಸ್ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು.

ಕನ್ನಡ ಸಿನಿಮಾಗಳು
author img

By

Published : Sep 26, 2019, 12:08 PM IST

Updated : Sep 26, 2019, 3:19 PM IST

'ಗೀತಾ'

ಗೋಲ್ಡನ್ ಸ್ಟಾರ್ ಗಣೇಶ್ ಮೂವರು ನಾಯಕಿಯರೊಂದಿಗೆ ಅಭಿನಯಿಸಿರುವ, 1980ರ ಗೋಕಾಕ್​ ಚಳವಳಿ ಹಿನ್ನೆಲೆ ಇರುವ ಸಿನಿಮಾ 'ಗೀತಾ' ಈ ವಾರ ಬಿಡುಗಡೆಯಾಗುತ್ತಿದೆ. 1981 ಏಪ್ರಿಲ್ 8 ರಂದು ಶಂಕರ್ ನಾಗ್ ಅಭಿನಯದ ‘ಗೀತಾ’ ಸಿನಿಮಾ ಬಿಡುಗಡೆ ಆಗಿತ್ತು. ಸುಮಾರು 38 ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ 38 ಸಿನಿಮಾ ಆಗಿ ಅದೇ ಹೆಸರಿನಲ್ಲಿ 'ಗೀತಾ' ಬಿಡುಗಡೆ ಆಗುತ್ತಿದೆ. ಎಸ್​​​.ಎಸ್​​​​. ಫಿಲಮ್ಸ್​​ ಜೊತೆ ಗೋಲ್ಡನ್ ಮೂವೀಸ್ ಸಹ ನಿರ್ಮಾಣದಲ್ಲಿ ಸಯ್ಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

geetha
'ಗೀತಾ'

ವಿಜಯ್ ನಾಗೇಂದ್ರ ಈ ಸಿನಿಮಾದಿಂದ ಸ್ವತಂತ್ರ ನಿರ್ದೇಶಕರಾಗಿ ಪರಿಚಯ ಆಗುತ್ತಿದ್ದಾರೆ. ಈ ಮುನ್ನ ಗಜಕೇಸರಿ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಜಕುಮಾರ ಸಿನಿಮಾಗಳಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಗೀತಾ’ ಚಿತ್ರದ ಕಥೆ, ಸಂಭಾಷಣೆ, ಹಾಡುಗಳಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಪಾತ್ರ ಕೂಡಾ ಇದೆ. ನಾಗೇಂದ್ರ ಬಿ.ಎಂ. ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಆರು ಹಾಡುಗಳಿಗೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್​​​ಕುಮಾರ್ ಭಾಗವಹಿಸಿದ್ದ ಕೆಲವೊಂದು ವಿಡಿಯೋ ತುಣುಕುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಗಣೇಶ್​​ ಎರಡು ಶೇಡ್​​​​​​ಗಳಲ್ಲಿ ನಟಿಸಿದ್ದು ಪಾರ್ವತಿ ಅರುಣ್​​​, ಪ್ರಯಾಗ ಮಾರ್ಟಿನ್ ಹಾಗೂ ಶಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ನಟಿಸಿದ್ದಾರೆ. ಸುಧಾರಾಣಿ, ದೇವರಾಜ್​, ರಂಗಾಯಣ ರಘು, ಅಚ್ಯುತ್ ಕುಮಾರ್​​​ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ​​

Kiss
'ಕಿಸ್'

‘ಕಿಸ್’

ಅಂಬಾರಿ, ಐರಾವತ, ರಾಟೆ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್​​​​​​ ನಿರ್ಮಿಸಿ, ನಿರ್ದೇಶಿಸಿರುವ 'ಕಿಸ್' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬಜೆಟ್​ ಹಾಗೂ ಹೊಸ ನಾಯಕ, ನಾಯಕಿ ಇರುವ ಸಿನಿಮಾ ಇದು. ಶ್ರೀಮಂತ ಹುಡುಗ ಅರ್ಜುನ್ ಪಾತ್ರದಲ್ಲಿ ವಿರಾಟ್ ಹಾಗೂ ಮುದ್ದಾದ, ಚೂಟಿ ಹುಡುಗಿ ನಂದಿನಿ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದು ಪ್ರೀತಿಸುವ ಹೃದಯಗಳಿಗಾಗಿ ತಯಾರಾಗಿರುವ ಸಿನಿಮಾ. ‘ಕಿಸ್’ ಅಂದಾಕ್ಷಣ ಯಾವ ಮುಜುಗರ ಪಡಬೇಕಾಗಿಲ್ಲ. KISS ಎಂದರೆ ’ಕೀಪ್ ಇಟ್ ಸಿಂಪಲ್ ಅ್ಯಂಡ್​​​ ಶಾರ್ಟ್’ ಎಂಬ ಅರ್ಥ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ. ಬೆಂಗಳೂರು, ಮಡಿಕೇರಿ, ಹೃಷಿಕೇಷ್, ಊಟಿ, ಕುದುರೆಮುಖ, ಕೇರಳ, ಗೋವಾ, ಡಾರ್ಜಲಿಂಗ್ ಸೇರಿ ವಿದೇಶದಲ್ಲಿ ಕೂಡಾ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಯುವನಟ ವಿರಾಟ್ ಬಂಗಿ ಜಂಪ್ ಮಾಡಿರುವುದು ವಿಶೇಷ.

ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಮೋಡಿ ಮಾಡಿವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ ಬೆಟ್ಟೇಗೌಡ ವರ್ಸಸ್ ಚಿಕ್ಕ ಬೋರಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳುಗರನ್ನು ಹಾಗೂ ನೋಡುಗರನ್ನು ಪಡೆದುಕೊಂಡಿದೆ. ಪೋಷಕ ಪಾತ್ರಗಳಲ್ಲಿ ಚಿಕ್ಕಣ್ಣ, ಅವಿನಾಶ್​​​, ಮನಿಷ್ ಶೆಟ್ಟಿ, ಸುಂದರ್, ದತ್ತಣ್ಣ, ಭಾರ್ಗವಿ ನಾರಾಯಣ್ ಅಭಿನಯಿಸಿದ್ದಾರೆ. ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ಅರ್ಜುನ್ ಶೆಟ್ಟಿ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯ ನೃತ್ಯ, ಡಾ ಕೆ. ರವಿವರ್ಮ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಇದೆ.

Navaratri
'ನವರಾತ್ರಿ'

‘ನವರಾತ್ರಿ’

ದುಷ್ಟಶಕ್ತಿ ವಿರುದ್ಧ ಹೋರಾಡುವ ಕಥಾವಸ್ತು ಹೊಂದಿರುವ ‘ನವರಾತ್ರಿ’ ಈ ವಾರ ಬಿಡುಗಡೆಯಾಗಲಿದೆ. ದೈವಶಕ್ತಿಯನ್ನು ಎದುರು ಹಾಕಿಕೊಂಡರೆ ಏನಾಗಬಹುದು ಎಂಬ ವಿಚಾರವನ್ನು ನಿರ್ದೇಶಕ ಲಕ್ಷ್ಮಿಕಾಂತ್ ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ. ಫ್ಯಾಂಟಸಿ ಥ್ರಿಲ್ಲರ್ ಕಾಫೀಸ್ ಸಿನಿಮಾ ಅಡಿಯಲ್ಲಿ ರೆಡ್ಡಿವಂಶಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಲೋಕೇಶ್ ಸಂಕಲನ, ನರೇಶ್ ಕುಮಾರನ್ ಸಂಗೀತ ಇದೆ. 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್​​​, ಒರಟ ಐ ಲವ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಹೃದಯ ಆವಂತಿ ಈ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಶಿವಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್​ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

'Atakkuntu lekkakkilla'
ಆಟಕ್ಕುಂಟು ಲೆಕ್ಕಕ್ಕಿಲ್ಲ

‘ಆಟಕ್ಕುಂಟು ಲೆಕ್ಕಕಿಲ್ಲ’

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ವಸುಂಧರ ಕೃತಿಕ್ ಫಿಲಮ್ಸ್​​​ ಬ್ಯಾನರ್ ಅಡಿ ನಿರ್ಮಾಣವಾದ ‘ಆಟಕ್ಕುಂಟು ಲೆಕ್ಕಕಿಲ್ಲ’ ಸಿನಿಮಾ ಈ ವಾರ ತೆರೆ ಕಾಣುತ್ತಿದೆ. ಕಥೆ, ಚಿತ್ರಕಥೆ ಬರೆದು ರಾಮಚಂದ್ರ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ, ಶ್ರೀಕಾಂತ್ ಸಂಕಲನ ಇದೆ. ಇದು ಸೈಕಲಾಜಿಕಲ್ ಥ್ರಿಲ್ಲರ್​​​​​​​​​​​​ ಕಥಾವಸ್ತು ಹೊಂದಿದೆ. ಸಂಜಾರಿ ವಿಜಯ್ ಜೊತೆ ಮಯೂರಿ, ಶೋಭರಾಜ್, ದುನಿಯಾ ರಶ್ಮಿ, ಅಚ್ಯುತ್ ಕುಮಾರ್, ಭಾರತ್​ ಸಾಗರ್, ಗೌತಮ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಗೀತಾ ಬರ್ತಾಳೆ ಕಿಸ್ ಕೊಡ್ತಾಳೆ, ನವರಾತ್ರಿ ಅಂದು ಆಟಕ್ಕುಂಟು ಲೆಕ್ಕಕಿಲ್ಲ

ಇದೆ ಶುಕ್ರವಾರ ನಾಲ್ಕು ಕನ್ನಡ ಸಿನಿಮಗಳು ತೆರೆಯ ಮೇಲೆ ಅಪ್ಪಳಿಸಲಿದೆ. ಈ ನಾಲ್ಕು ಚಿತ್ರಗಳ ಶೀರ್ಷಿಕೆ ಸೇರಿಸಿದರೆ ಮೇಲಿನಂತೆ ವಾಕ್ಯ ರಚನೆ ಮಾಡಬಹುದು.

ಗೋಲ್ಡನ್ ಸ್ಟಾರ್ ಗಣೇಶ್ ಮೂರು ನಾಯಕಿಯರು – ಶಾನ್ವಿ ಶ್ರೀವತ್ಸವ್, ಪ್ರಯಾಗ್ ಮಾರ್ಟಿನ್ ಮತ್ತು ಪಾರ್ವತಿ ಜೊತೆ ತಾಯಿ ಆಗಿ ಸುಧಾರಾಣಿ ಸಹ ಇರುವ ಈ ಸಿನಿಮಾ 1980 ಸಮಯದ ಗೋಕಾಕ್ ಚಳುವಳಿ ಹಿನ್ನಲೆ ಇರುವ ಚಿತ್ರ.

ಕಿಸ್ ಯಶಸ್ವಿ ನಿರ್ದೇಶಕ ನಿರ್ಮಾಪಕ ಸಹ ಆಗಿ ಈ ಚಿತ್ರದಿಂದ ಮತ್ತೊಮ್ಮೆ ಹೊಸ ನಾಯಕ ವಿರಾಟ್ ಹಾಗೂ ಹೊಸ ನಾಯಕಿ ಶ್ರೀ ಲೀಲ ಅವರನ್ನು ಪರಿಚಯಿಸಿ ಒಂದು ಮುದ್ದಾದ ಲವ್ ಸ್ಟೋರಿ ಸಿನಿಮಾ ತೆರೆಗೆ ತಂದಿದ್ದಾರೆ. ಅದ್ಧೂರಿ, ಅಂಬಾರಿ, ರಾಟೆ ಹಾಗೂ ಐರಾವತ ಸಿನಿಮಾಗಳ ನಿರ್ದೇಶಕ ಎ ಪಿ ಅರ್ಜುನ್ ನಿರ್ಮಾಣದ ಸಿನಿಮಾ ಸಹ ಇದು.

ಮೂರನೆಯ ಸಿನಿಮಾ ಆಟಕ್ಕುಂಟು ಲೆಕ್ಕಕಿಲ್ಲ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಅಭಿನಯದ ಸಿನಿಮಾ, ನಾಲ್ಕನೇ ಸಿನಿಮಾ ನವರಾತ್ರಿ - ಕಾಳಿ ದೇವಸ್ಥಾನದ ಮೇಲೆ ಒಂದು ಕಟ್ಟಡ ರಚನೆ ಇಂದ ಆಗುವ ಅನಾಹುತವನ್ನು ನಿರ್ದೇಶಕ ಲಕ್ಷ್ಮೀಕಾಂತ್ ಹೇಳಲು ಹೊರಟಿದ್ದಾರೆ.

ಗೀತಾ – ಅಂದು 1981 ಏಪ್ರಿಲ್ 8 ರಂದು ಶಂಕರ್ ನಾಗ್ ಅಭಿನಯದ ಸಿನಿಮಾ ಗೀತಾ ಬಿಡುಗಡೆ ಆಗಿತ್ತು. ಇಂದು 38 ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ 38 ಸಿನಿಮಾ ಆಗಿ ಅದೇ ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಎಸ್ ಎಸ್ ಫಿಲ್ಮ್ಸ್ ಜೊತೆ ಗೋಲ್ಡನ್ ಮೂವೀಸ್ ಸಹ ನಿರ್ಮಾಣ ಸಯ್ಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ನೋಡಿಕೊಂಡಿದ್ದಾರೆ.

ವಿಜಯ್ ನಾಗೇಂದ್ರ ಈ ಸಿನಿಮಾ ಇಂದ ಸ್ವತಂತ್ರ ನಿರ್ದೇಶಕ ಆಗಿ ಪರಿಚಯ ಆಗುತ್ತಿದ್ದಾರೆ. ಇವರು ಈ ಹಿಂದೆ ಗಜಕೇಸರಿ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ್ ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಇದೆ. ಈ ಗೀತಾ ಚಿತ್ರದ ಕಥೆ, ಸಂಭಾಷಣೆ, ಹಾಡುಗಳಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಕೈವಾಡ ಸಹ ಇದೆ. ನಾಗೇಂದ್ರ ಬಿ ಎಂ ಸಂಭಾಷಣೆ ರಚಿಸಿದ್ದಾರೆ. ಆರು ಹಾಡುಗಳಿಗೆ ಅನೂಪ್ ರುಬೆನ್ಸ್ ಸಂಗೀತ, ಶ್ರೀಶ ಕೂಡುವಲ್ಲಿ ಛಾಯಾಗ್ರಹಣ ಇರುವ ಈ ಚಿತ್ರ 1981 ರಲ್ಲಿ ಗೋಕಾಕ್ ಚಳುವಳಿ ವಿಷಯವನ್ನು ಹಿನ್ನಲೆ ಆಲ್ಲಿ ಇಟ್ಟುಕೊಂಡಿದೆ. ಡಾ ರಾಜಕುಮಾರ್ ಅವರು ಮುಂಚೂಣಿಯಲ್ಲಿ ಇದ್ದ ಆ ಚಳುವಳಿಯ ಕೆಲವು ದೃಶ್ಯಗಳನ್ನು ಸಹ ಗೀತಾ ಚಿತ್ರ ಬಳಸಿಕೊಂಡಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಮೂರು ಹಂತದಲ್ಲಿ ಮೂರು ನಾಯಕಿಯರು ಆಗಮಿಸುತ್ತಾರೆ. ಪಾರ್ವತಿ ಅರುಣ್, ಪ್ರಯಾಗ್ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವತ್ಸವ್ ನಾಯಕಿಯರು. ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಇತರರು ತಾರಗನದಲಿದ್ದಾರೆ.

ಕಿಸ್ಈ ವಾರ ಬಿಡುಗಡೆ

ಕನ್ನಡದ ಬಹು ನಿರೀಕ್ಷಿತ ಸಿನೆಮಾ ‘ಕಿಸ್’ ಎ ಪಿ ಅರ್ಜುನ್ ಸಾರಥ್ಯದಲ್ಲಿ (ಅಂಭಾರಿ ಅದ್ಧೂರಿರಾಟೆ ಹಾಗೂ ಐರಾವತ’  ಖ್ಯಾತಿಯ ನಿರ್ದೇಶಕ) ಹಾಗೂ ಎ ಪಿ ಅರ್ಜುನ್ ಫಿಲ್ಮ್ಸ್ ನಿರ್ಮಾಣದ ಚಿತ್ರ ಅದ್ದೂರಿಯಾಗಿ ತಯಾರಾಗಿದ್ದು ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ.

ಎ ಪಿ ಅರ್ಜುನ್ ಅವರ 10 ವರ್ಷದ ವೃತ್ತಿಯಲ್ಲಿ ಅತಿ ಹೆಚ್ಚು ಬಜೆಟಿನ ಸಿನಿಮಾ ಹಾಗೂ ಹೊಸ ನಾಯಕ ಹಾಗೂ ನಾಯಕಿ – ವಿರಾಟ್ ಹಾಗೂ ಶ್ರೀ ಲೀಲ ಪರಿಚಯಿಸುತ್ತಿರುವ ಸಿನಿಮಾ ವಿಭಿನ್ನವಾಗಿ ತೆರೆಗೆ ತಂದಿದ್ದಾರೆ. ತೆರೆಯ ಮೇಲೆ ಶ್ರೀಮಂತ ಹುಡುಗನಾಗಿ ಅರ್ಜುನ್ ಪಾತ್ರದಲ್ಲಿ ಸ್ನೇಹಕ್ಕೆ ಅತ್ಯಂತ ಬೆಲೆ ಕೊಡುವ ವಿರಾಟ್ ಹಾಗೂ ಮುದ್ದಾದ, ಚೂಟಿ ಹುಡುಗಿ ಆಗಿ ನಂದಿನಿ ಪಾತ್ರವನ್ನು ಶ್ರೀಲೀಲ ನಿರ್ವಹಿಸಿದ್ದಾರೆ.

ಇದೊಂದು ಪ್ರೀತಿಸುವ ಹೃದಯಗಳಿಗೆ ತಯಾರಾಗಿರುವ ಚಿತ್ರ.ಕಿಸ್’ ಅಂದಾಕ್ಷಣ ಯಾವ ಮುಜುಗರ ಬೇಕಾಗಿಲ್ಲ. ಎ ಪಿ ಅರ್ಜುನ್ ಅವರ ‘ಕಿಸ್’ ಅಂದರೆ – ಕೀಪ್ ಇಟ್ ಸಿಂಪಲ್ ಅಂಡ್ ಶಾರ್ಟ್’ ಎಂದು ಅರ್ಥ.

ನಿರ್ದೇಶಕ ಎ ಪಿ ಅರ್ಜುನ್ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರುಮಡಿಕೇರಿ, ರಿಷಿಕೇಶ್, ಊಟಿ, ಕುದುರೆಮುಖ, ಕೇರಳ, ಗೋವಡಾರ್ಜಿಲಿಂಗ್ ಹಾಗೂ ವಿದೇಶದಲ್ಲಿ ಸಹ ಚಿತ್ರೀಕರಣ ಮಾಡಿದ್ದಾರೆ. ಚಿತ್ರದಲ್ಲಿ ಹೊಸ ನಾಯಕ ವಿರಾಟ್ ಭಂಗಿ ಜಂಪ್ ಮಾಡಿರುವುದು ವಿಶೇಷ.

ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡುಗಳು ಈಗಾಗಲೇ ಮೋಡಿ ಮಾಡಿದ್ದಾಗಿದೆ. ಈಗಾಗಲೇ ಮೂರು ಗೀತೆಗಳು ಜನಪ್ರಿಯತೆ ಪಟ್ಟಿಯಲ್ಲಿ ಸೇರಿಕೊಂಡಿದೆ. ನೀನೆ ಮೊದಲು....ಲೀಲ ಸುಶೀಲಾ....ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ ಬೆಟ್ಟೆ ಗೌಡ ವರ್ಸಸ್  ಚಿಕ್ಕ ಬೋರಮ್ಮ....ಹೆಚ್ಚು ಕೇಳುಗರನ್ನು ಹಾಗೂ ನೋಡುಗರನ್ನು ಸಾಮಾಜಿಕ ಜಾಲತಾನದಲ್ಲಿ ಪಡೆದುಕೊಂಡಿದೆ.

ಪೋಷಕ ಪಾತ್ರಗಳಲ್ಲಿ ಚಿಕ್ಕಣ್ಣ, ಅವಿನಾಷ್, ಮನಿಷ್ ಶೆಟ್ಟಿ, ಸುಂದರ್, ದತ್ತಣ್ಣ, ಭಾರ್ಗವಿ ನಾರಾಯಣ್ ಹಾಗೂ ಇತರರು ತಾರಗಣದಲ್ಲಿದ್ದಾರೆ. ನಾಯಕಿ ಅಪೂರ್ವ ಗೌಡ ಶೀಲ ಸುಶೀಲಾ....ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

ಕಿಸ್’....ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತಅರ್ಜುನ್ ಶೆಟ್ಟಿ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯ ನೃತ್ಯಡಾ ಕೆ ರವಿ ವರ್ಮ ಅವರ ಸಾಹಸದೀಪು ಎಸ್ ಕುಮಾರ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿದ್ದಾರೆ.

ಈ ವಾರ ತೆರೆಗೆ ನವರಾತ್ರಿ

ಈ ವಾರ ಬಿಡುಗಡೆ ಆಗುತ್ತಿರುವ ನವರಾತ್ರಿ ಕನ್ನಡ ಸಿನಿಮಾ ದುಷ್ಟ ಶಕ್ತಿಯ ವಿರುದ್ದ ಹೊರಾಡುವ ಕಥಾ ವಸ್ತು ಹೊಂದಿದೆ. ದೈವ ಶಕ್ತಿಯ ಮುಂದೆ ಹೋರಾಟ ನಡೆಸಿದರೆ ಎನಾಗುವುದು ಎಂದು ನಿರ್ದೇಶಕ ಲಕ್ಷ್ಮೀಕಾಂತ್ ಹೇಳಿದ್ದಾರೆ. ಕಾಳಿ ದೇವಿ ವಿಗ್ರಹ ಇರುವ ಕಡೆ ಒಂದು ಕಟ್ಟಡ ತಲೆ ಎತ್ತಿರುತ್ತದೆ. ಇದರ ಪರಿಣಾಮ ಏನು ಎಂಬುದು ಚಿತ್ರಕತೆಯಲ್ಲಿ ವ್ಯಕ್ತ ಆಗುತ್ತದೆ.

ಒಂದು ಘಂಟೆ 55 ನಿಮಿಷದ ಈ ನವರಾತ್ರಿ ಚಿತ್ರ ಫ್ಯಂಟಸಿ ಥ್ರಿಲ್ಲರ್ ಕಾಫೀಸ್ ಸಿನಿಮಸ್ ಅಡಿಯಲ್ಲಿ  ಸಾಮಾನ್ಯ ರೆಡ್ಡಿ ವಂಶಿ ಅವರು ನಿರ್ಮಾಣ ಮಾಡಿದ್ದಾರೆ. ಲೋಕೇಶ್ ಚೆನ್ನ ಸಂಕಲನ,  ನರೇಶ್ ಕುಮಾರಾನ್ ಸಂಗೀತ ನೀಡಿದ್ದಾರೆ.

ತ್ರಿವಿಕ್ರಮ್ (ವಿಕ್ರಮ್ ಮಂಜುನಾಥ್ ಪದ್ಮಾವತಿ ಟಿ ವಿ ಸೀರಿಯಲ್) ಹೃದಯ ಆವಂತಿ (ಒರಟ ಐ ಲವ್ ಯು ಹಾಗೂ ತ್ರಾಟಕ ನಾಯಕಿ), ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಆಟಕ್ಕುಂಟು ಲೆಕ್ಕಕಿಲ್ಲ ಇದೆ ಶುಕ್ರವಾರ ಬಿಡುಗಡೆ

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ವಸುಂಧರ ಕೃತಿಕ್ ಫಿಲ್ಮ್ಸ್ ಆಟಕ್ಕುಂಟು ಲೆಕ್ಕಕಿಲ್ಲ  ಚಿತ್ರವನ್ನೂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವರು ರಾಮಚಂದ್ರ. ಪರಮೇಶ್ ಛಾಯಾಗ್ರಹಣ, ನೋಬಿನ್ ಪಾಲ್ ಸಂಗೀತ, ಶ್ರೀಕಾಂತ್ ಸಂಕಲನ ಮಾಡಿರುವ ಈ ಚಿತ್ರ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತು ಹೊಂದಿದೆ.

ಸಂಚಾರಿ ವಿಜಯ್ ಜೊತೆ ಮಯೂರಿ, ಶೋಭರಾಜ್, ಧುನಿಯ ರಶ್ಮಿ, ಅಚ್ಯುತ್ ಕುಮಾರ್, ಭಾರತ್ ಸಾಗರ್, ಗೌತಮ್ ಹಾಗೂ ಇತರರು ತಾರಗಣದಲ್ಲಿದ್ದಾರೆ. 

Last Updated : Sep 26, 2019, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.