ETV Bharat / sitara

'ಸೈ ರಾ ನರಸಿಂಹರೆಡ್ಡಿ' ಸೆಟ್​​​ನಲ್ಲಿ ಬೆಂಕಿ ಅವಘಡ: 2 ಕೋಟಿ ರೂ. ನಷ್ಟ - undefined

ಸ್ವಾತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ 'ಸೈ ರಾ ನರಸಿಂಹರೆಡ್ಡಿ' ಶೂಟಿಂಗ್ ಸೆಟ್​​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 2 ಕೋಟಿ ರೂಪಾಯಿ ಸಾಮಗ್ರಿ ನಷ್ಟವಾಗಿದೆ ಎನ್ನಲಾಗಿದೆ.

'ಸೈ ರಾ ನರಸಿಂಹರೆಡ್ಡಿ'
author img

By

Published : May 3, 2019, 10:26 AM IST

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಸೈ ರಾ ನರಸಿಂಹರೆಡ್ಡಿ' ಸೆಟ್​​​ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಮಾರು 2 ಕೋಟಿ ರೂಪಾಯಿ ಮೌಲ್ಯದಷ್ಟು ಸಾಮಗ್ರಿಗಳು ನಷ್ಟವಾಗಿದೆ.

'ಸೈ ರಾ ನರಸಿಂಹರೆಡ್ಡಿ' ಸೆಟ್​​​

ಹೈದರಾಬಾದ್​​ ಕೊಕ್ಕಪೇಟ್​ ಬಳಿಯ ಅಲ್ಲು ಅರ್ಜುನ್ ಫಾರ್ಮ್ ಹೌಸ್​​​ನಲ್ಲಿ 'ಸೈ ರಾ ನರಸಿಂಹರೆಡ್ಡಿ' ಸೆಟ್ ಹಾಕಲಾಗಿತ್ತು. ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಸೆಟ್​​ಗೆ ಬೆಂಕಿ ಹೊತ್ತಿಕೊಂಡು ಕ್ಷಣಮಾತ್ರವೇ ಇಡೀ ಸೆಟ್ ಸುಟ್ಟು ಬೂದಿಯಾಗಿದೆ. ಅದೃಷ್ಟವಶಾತ್ ಆ ವೇಳೆ ಶೂಟಿಂಗ್ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ತಿಳಿದುಬಂದಿಲ್ಲ ಎಂದು ಚಿತ್ರತಂಡ ಹೇಳಿದೆ.

ಇನ್ನು ಶೂಟಿಂಗ್ ಆರಂಭಿಸಲು ಸಂಪೂರ್ಣ ಸೆಟ್​ ಮತ್ತೆ ಹಾಕುವರೆಗೂ ಕಾಯಬೇಕಿದೆ. ಈ ವರ್ಷ ಅಕ್ಟೋಬರ್​​ನಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಈ ಅವಘಡದಿಂದ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಇನ್ನು ಈ ದುರ್ಘಟನೆಯಿಂದಾಗಿ ಸುಮಾರು 2 ಕೋಟಿ ರೂಪಾಯಿ ಸಾಮಗ್ರಿ ನಷ್ಟವಾಗಿದೆ ಎನ್ನಲಾಗಿದೆ. ರಾಮ್​ ಚರಣ್ ತೇಜ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದಾರೆ.

Intro:Body:

sye ra incident

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.