ಸ್ಯಾಂಡಲ್ವುಡ್ನಲ್ಲಿ ಬಿಲ್ಡರ್ಸ್ ಹಾಗೂ ಬ್ಯುಸಿನೆಸ್ಮನ್ಗಳು ತಮ್ಮ ಮಕ್ಕಳನ್ನ ಹೀರೋ ಮಾಡೋದಕ್ಕೆ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗ್ತಿದೆ. ಆದರೆ ಇಲ್ಲೊಬ್ಬ ತಂದೆ ಸ್ಟೋನ್ ವ್ಯಾಪಾರ ಮಾಡುವ ಮೂಲಕ ಮಗನ ಆಸೆಗಾಗಿ ಸಿನಿಮಾ ಮಾಡಿದ್ದಾರೆ.
‘19 ಏಜ್ ಈಸ್ ನಾನ್ಸೆನ್ಸ್’ ಎಂಬ ಟೈಟಲ್ ಮೂಲಕ ಈ ಸಿನಿಮಾ ರೆಡಿಯಾಗ್ತಿದೆ. ಲಹರಿ ವೇಲು ಹಾಗೂ ನಿರ್ಮಾಪಕ ಭಾ.ಮಾ.ಹರೀಶ್ ಈ ಸಿನಿಮಾದ ಧ್ವನಿ ಸುರುಳಿ ರಿಲೀಸ್ ಮಾಡಿ, ಹೊಸ ತಂಡಕ್ಕೆ ಶುಭಹಾರೈಸಿದ್ರು.
ಮನೆ ಮುಂದೆ ಕಲ್ಲಿನ ಕೆಲಸಗಳನ್ನು ಮಾಡುವ ವ್ಯಾಪಾರಿ ಎಸ್.ಲೋಕೇಶ್ ಮಗ ಮನುಷ್ಗಾಗಿ ಈ ಸಿನಿಮಾ ಮಾಡಿದ್ದಾರಂತೆ. ಚಿತ್ರದಲ್ಲಿ ಮಧುಮಿತ ಮತ್ತು ಶ್ರೀ ಲಕ್ಷ್ಮೀ ಮಂಡ್ಯ ಅಭಿನಯಿಸಿದ್ದಾರೆ. ಅನು ಚಿತ್ರದಲ್ಲಿ ಖಳ ನಟನಾಗಿದ್ದ ಬಾಲು ಈ ಚಿತ್ರದಲ್ಲೂ ನಟಿಸಿದ್ದಾರೆ. 19 ರಿಂದ 25ರ ವಯೋಮಿತಿ ಇರುವ ಹರೆಯದ ವಯಸ್ಸಿನ ಹುಡುಗ, ಹುಡುಗಿಯರ ಜೀವನದಲ್ಲಿ ನಡೆಯುವ ಕಥೆ ಹೊತ್ತು‘19 ಏಜ್ ಈಸ್ ನಾನ್ಸೆನ್ಸ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
ಹಲವಾರು ಜನ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಸುರೇಶ್ ಗಿಣಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಕ್ಟರಿ ಕ್ಯಾಮರಾ ಕಣ್ಣಲ್ಲಿ ಚಿತ್ರ ಸರೆಯಾಗಿದೆ. ಸಿನಿಮಾ ನಿರ್ಮಾಣದ ಬಗ್ಗೆ ಅಷ್ಟೇನೂ ಗೊತ್ತಿರದ ಎಸ್.ಲೋಕೇಶ್, ಸ್ಟೋನ್ ವ್ಯಾಪಾರ ಮಾಡಿ ಮಗ ಮನುಷ್ಗಾಗಿ ಬರೋಬ್ಬರಿ 65 ಲಕ್ಷ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘19 ಏಜ್ ಈಸ್ ನಾನ್ಸೆನ್ಸ್’ ಮುಂದಿನ ತಿಂಗಳು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.