ಮುಂಬೈ(ಮಹಾರಾಷ್ಟ್ರ) ನೂರಾರು ಹಾಡುಗಳಿಗೆ ಜನ್ಮ ನೀಡಿರುವ ಬಪ್ಪಿ ಲಹರಿ ಭಾರತೀಯ ಚಿತ್ರರಂಗ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅವರ ಅಗಲಿಗೆ ಬಗ್ಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಕಣ್ಣೀರು ಹಾಕಿದ್ದಾರೆ. ಬಾಲಿವಡ್ನ ಡಿಸ್ಕೋ ಡ್ಯಾನ್ಸರ್ ಮಾಂತ್ರಿಕ ಬಪ್ಪಿ ಲಹರಿ ಅವರೊಂದಿಗೆ ಒಡನಾಟದ ಬಗ್ಗೆಯೂ ಕೆಲ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಅಂದು ಅವರ ನಿಧನ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗವೇ ನೋವಿನಲ್ಲಿತ್ತು. ಹಲವರು ಸಂತಾಪ ಸೂಚಿಸಿ ಅವರ ಒಡನಾಟ ಮೆಲಕು ಹಾಕಿದ್ದರು. ಆದರೆ, ಓರ್ವ ಸಾಮಾನ್ಯ ನಟ ಮಿಥುನ್ ಚಕ್ರವರ್ತಿಯನ್ನು ಡಿಸ್ಕೋ ಹಾಡಿಗೆ ತಂದು ನಿಲ್ಲಿಸಿದ್ದ ಕೀರ್ತಿ ಯಾರು ಮರೆಯುವಂತಿಲ್ಲ. ಈ ಜೋಡಿಯ ಮುಂದೆ ಇಂತಹ ಹತ್ತಾರು ಪ್ರಯೋಗಗಳನ್ನು ಮಾಡಿದ್ದು ಇತಿಹಾಸ.
ಆದರೆ, ಲಹಿರಿ ನಿಧನರಾದ ದಿನ ಮಿಥುನ್ ಚಕ್ರವರ್ತಿ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎಂಬ ನೋವು ಬಹಳ ಕಾಡತೊಡಗಿತ್ತು. ಅವತ್ತು ತಾವು ಏಕೆ ಲಹಿರಿ ಅವರ ದರ್ಶನ ಪಡೆಯಲಿಲ್ಲ ಅನ್ನೋದರ ಬಗ್ಗೆ ಮಿಥುನ್ ಚಕ್ರವರ್ತಿ ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ.
ಲಹಿರಿ ನಿಧನರಾದಾಗ ನಾನು ಬೆಂಗಳೂರಿನಲ್ಲಿದ್ದೆ. ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಯಿತು. ಆ ಸ್ಥಿತಿಯಲ್ಲಿ ಬಪ್ಪಿ ಅವರನ್ನು ಕಾಣುತ್ತೇನೆಂದು ನಾನು ಕನಸು ಸಹ ಕಂಡಿರಲಿಲ್ಲ. ನಾನು ಅವರನ್ನು ಹಾಗೆ ನೋಡಲು ಬಯಸಿರಲಿಲ್ಲ, ಬಯಸುವುದೂ ಇಲ್ಲ. ಏಕೆಂದರೆ ನಾನು ಅವರೊಂದಿಗೆ ಶಾಶ್ವತವಾಗಿರಲು ಇಚ್ಚಿಸುತ್ತೇನೆ
ಕೊರೊನಾದಿಂದ ನನ್ನ ತಂದೆ ತೀರಿಕೊಂಡಿದ್ದರಿಂದ ನಾನು ಅವರ ಅಂತಿಮ ದರ್ಶನ ಪಡೆಯಲಾಗಲಿಲ್ಲ. ಅವರೊಂದಿಗೆ ಕಳೆದ ದಿನ ಇನ್ನೂ ನನೆಪಿವೆ. ಒಟ್ಟಿಗೆ ಹಾಡುಗಳನ್ನು ಹಾಡಿದ್ದು, ಒಟ್ಟಿಗೆ ಕುಣಿದಿದ್ದು, ಒಟ್ಟಿಗೆ ಓಡಾಡಿದ್ದು ಆ ಎಲ್ಲ ದಿನಗಳು ಇನ್ನೂ ನೆನಪಿನಲ್ಲಿವೆ ಎಂದು ಲಹರಿ ಅವರ ಒಡನಾಟ ಹಂಚಿಕೊಂಡರು.
70 ಮತ್ತು 80 ರ ದಶಕದಲ್ಲಿ ಬಾಲಿವುಡ್ನಲ್ಲಿ ಡಿಸ್ಕೋ ಹಾಡುಗಳನ್ನು ತಂದು ಹೊಸ ಕ್ರಾಂತಿ ಮಾಡಿದವರು. ಹೊಸ ಸಂಗೀತದ ಅಲೆಗಳನ್ನು ಹುಟ್ಟುಹಾಕಿದ ಕೀರ್ತಿ ಬಪ್ಪಿ ಲಹಿರಿಗೆ ಸಲ್ಲುತ್ತದೆ. ಅವರು ಕೇವಲ ಡಿಸ್ಕೋ ಹಾಡುಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರೊಬ್ಬ ಬಹುಮುಖ ಪ್ರತಿಭೆಯಾಗಿದ್ದರು.
ಪ್ರತಿ ನಾಯಕ, ನಾಯಕಿ, ನಿರ್ಮಾಪಕರಿಗೆ ಹಿಟ್ ಹಾಡುಗಳನ್ನು ನೀಡಿ ಸಕ್ಸಸ್ ತಂದುಕೊಟ್ಟವರು. ನಾನಷ್ಟೇ ಅಲ್ಲ, ಯಾರೂ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇದ್ಯ ಚಕ್ರವರ್ತಿ ಪ್ರೈಮ್ ವಿಡಿಯೋದ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಚಿತ್ರ ಬೆಸ್ಟ್ ಸೆಲ್ಲರ್‌ನಲ್ಲಿ ನಟಿಸಿದ್ದಾರೆ.