ETV Bharat / sitara

40 ವರ್ಷಗಳ ಒಡನಾಟ...ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಬಿಗ್​​ ಬಿ..! - undefined

ಅಮಿತಾಬ್​​​​ ಬಚ್ಚನ್​​​​ ಮ್ಯಾನೇಜರ್ ಶೀತಲ್ ಜೈನ್ ಅನಾರೋಗ್ಯದಿಂದ ಮೃತಪಟ್ಟಿದ್ದು ಅಮಿತಾಬ್, ಅಭಿಷೇಕ್ ಸೇರಿದಂತೆ ಕುಟುಂಬದ ಸದಸ್ಯರು ಈ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಹಾಗೂ ತಮ್ಮ ಮ್ಯಾನೇಜರ್ ನಡುವಿನ ಬಾಂಧವ್ಯವನ್ನು ಅಮಿತಾಬ್ ನೆನಪಿಸಿಕೊಂಡು ತಮ್ಮ ಬ್ಲಾಗ್​​ನಲ್ಲಿ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಅಮಿತಾಬ್​​
author img

By

Published : Jun 11, 2019, 1:11 PM IST

Updated : Jun 11, 2019, 1:23 PM IST

ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪಾರ್ಥಿವ ಶರೀರವೊಂದನ್ನು ಹೊತ್ತೊಯ್ಯುತ್ತಿರುವ ಈ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಬಹಳಷ್ಟು ಮಂದಿಗೆ ಅವರು ಹೊತ್ತೊಯ್ಯುತ್ತಿರುವುದು ಯಾರ ಶರೀರವನ್ನು ಎಂಬ ಅನುಮಾನ ಕಾಡಿತ್ತು.

amitahbh
ಅಂತ್ಯಕ್ರಿಯೆಗೆ ತೆರಳುತ್ತಿರುವ ಅಮಿತಾಬ್​​ ಬಚ್ಚನ್​, ಐಶ್ವರ್ಯ

ಸುಮಾರು 40 ವರ್ಷಗಳಿಂದ ಬಿಗ್​​ ಬಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ಶೀತಲ್ ಜೈನ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ಸಂಜೆ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ನೆರವೇರಿದ್ದು ಅಮಿತಾಬ್​, ಅಭಿಷೇಕ್, ಐಶ್ವರ್ಯ ರೈ ಸೇರಿದಂತೆ ಅಮಿತಾಬ್ ಕುಟುಂಬದ ಎಲ್ಲಾ ಸದಸ್ಯರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅಮಿತಾಬ್ ಹಾಗೂ ಪುತ್ರ ಅಭಿಷೇಕ್ ಇಬ್ಬರೂ ಶೀತಲ್ ಜೈನ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೂಡಾ ನೀಡಿದ್ದಾರೆ. ತಾವೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

  • Saddened to know about the demise of producer Shri #SheetalJain ji. Knew him for a long time as Mr. @SrBachchan‘s secretary. He was a very dignified and an extremely polite gentleman. May God give his family the strength to deal with this loss.🙏 #OmShanti pic.twitter.com/dsNXbp8yp3

    — Anupam Kher (@AnupamPKher) June 8, 2019 " class="align-text-top noRightClick twitterSection" data=" ">

ಇನ್ನು ತಮ್ಮ ಅಫಿಷಿಯಲ್ ಬ್ಲಾಗ್​​ನಲ್ಲಿ ಶೀತಲ್ ಜೈನ್ ಅವರ ಬಗ್ಗೆ ಅಮಿತಾಬ್​​​ ಬಹಳ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ. 'ಸುಮಾರು 40 ವರ್ಷಗಳ ಕಾಲ ನನ್ನ ಕಷ್ಟಸುಖಗಳನ್ನು ನೋಡಿದ್ದ ವ್ಯಕ್ತಿ ಇನ್ನಿಲ್ಲ. ನನ್ನ ಕಷ್ಟಸುಖಗಳನ್ನು ಅವರು ಹಂಚಿಕೊಂಡಿದ್ದಾರೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನನಗೂ ನನ್ನ ಕುಟುಂಬಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ನಾನು ಅಭಿನಯಿಸಬೇಕಾದ ಸಿನಿಮಾಗಳು, ಪಾಲ್ಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮುಂದೆ ನಿಂತು ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರು. ಯಾವುದಾದರೂ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬದ ಸದಸ್ಯರು ಪಾಲ್ಗೊಳ್ಳಲಾಗಲಿಲ್ಲ ಎಂದರೆ ಶೀತಲ್ ಅವರೇ ನಮ್ಮ ಪರವಾಗಿ ಭಾಗವಹಿಸುತ್ತಿದ್ದರು. ಅವರು ಬಹಳ ಸರಳ ವ್ಯಕ್ತಿ. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ' ಎಂದು ಶೀತಲ್ ಹಾಗೂ ತಮ್ಮ ನಡುವೆ ಇದ್ದ ಒಡನಾಟವನ್ನು ನೆನೆಸಿಕೊಂಡಿದ್ದಾರೆ.

  • Sad to know demise of Sheetal Jain ji. He was a very humble, soft spoken and gracious person. Film industry will miss him. My condolences to his family and friends. #OmShanti.🙏 https://t.co/ysVIHzeIwT

    — Madhur Bhandarkar (@imbhandarkar) June 8, 2019 " class="align-text-top noRightClick twitterSection" data=" ">

1998ರಲ್ಲಿ ಅಮಿತಾಬ್​​ ಬಚ್ಚನ್, ಗೋವಿಂದ ನಟಿಸಿದ್ದ 'ಬಡೇ ಮಿಯಾ ಚೋಟೆ ಮಿಯಾ' ಸಿನಿಮಾವನ್ನು ಶೀತಲ್ ಜೈನ್ ಅವರೇ ನಿರ್ಮಿಸಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಶೀತಲ್​ ಜೈನ್ ನಿಧನಕ್ಕೆ ಅನುಪಮ್ ಖೇರ್, ಮಧುರ್ ಭಂಡಾರ್ಕರ್ ಸೇರಿದಂತೆ ಇನ್ನಿತರ ಸೆಲಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

Intro:Body:

Amitabh Bachchan

Conclusion:
Last Updated : Jun 11, 2019, 1:23 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.