ETV Bharat / sitara

ಪಾತ್ರಕ್ಕಾಗಿ ಇಷ್ಟೊಂದು ಪರಿಶ್ರಮ! ಯಾರೀ ಸ್ಟಾರ್​​​​​​ನಟಿ, ಯಾವ ಸಿನಿಮಾ? - ಕಂಗನಾ ಸಹೋದರಿ ರಂಗೋಲಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಜೀವನಚರಿತ್ರಾಧಾರಿತ 'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಈ ಸಿನಿಮಾ ತಯಾರಿಗಾಗಿ ಸದ್ಯಕ್ಕೆ ಅವರು ಲಾಸ್ ಏಂಜಲೀಸ್​​​​​​ನಲ್ಲಿದ್ದು ಪ್ರೊಸ್ತಟಿಕ್ಸ್ ಗಮ್ ಮೇಕಪ್​​​ಗಾಗಿ ಉಸಿರು ಬಿಗಿಹಿಡಿದು ಕುಳಿತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಂಗನಾ ರಣಾವತ್​
author img

By

Published : Sep 21, 2019, 5:45 PM IST

ಯಾವುದೇ ಸಿನಿಮಾಗೆ ಕಮಿಟ್ ಆದ ನಂತರ ಆ ಪಾತ್ರಕ್ಕೆ ನಟ-ನಟಿಯರು ಸಾಕಷ್ಟು ಹೋಂವರ್ಕ್ ಮಾಡಬೇಕಿರುತ್ತದೆ. ತೂಕ ಹೆಚ್ಚಿಸಿಕೊಳ್ಳುವುದು, ಸ್ಲಿಮ್ ಆಗುವುದು ಸುಲಭದ ಮಾತಲ್ಲ. ಹಾಗೆ ಮತ್ತೆ ಕೆಲವೊಂದು ಪಾತ್ರಗಳಿಗೆ ಗಂಟೆಗಟ್ಟಲೆ ವಿಭಿನ್ನ ಮೇಕಪ್​ನೊಂದಿಗೆ ಕೂರುವುದು ನಿಜಕ್ಕೂ ಕಷ್ಟ.

  • This is how measurements for prosthetics are taken, it’s not easy to be an actor, Kangana so calm even in something which is so suffocating for us to even watch 😰 pic.twitter.com/APQ9OSP2aT

    — Rangoli Chandel (@Rangoli_A) September 19, 2019 " class="align-text-top noRightClick twitterSection" data=" ">

ತಾವು ಮಾಡುವ ಪಾತ್ರಕ್ಕಾಗಿ ಎಂತಹ ಕಷ್ಟವನ್ನಾದರೂ ಎದುರಿಸಬಲ್ಲೆ ಎನ್ನುವ ನಟಿಯರಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡಾ ಒಬ್ಬರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಕುರಿತಾಗಿ ಬಹಳಷ್ಟು ಸಿನಿಮಾಗಳು ಬರುತ್ತಿವೆ. ಬಾಲಿವುಡ್​​​ನಲ್ಲಿ ತಯಾರಾಗುತ್ತಿರುವ 'ತಲೈವಿ' ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ, ಜಯಲಲಿತಾ ಪಾತ್ರದಲ್ಲಿ ಹೇಗೆ ಕಾಣುತ್ತಾರೆ, ಅದರಲ್ಲೂ ಮಧ್ಯವಯಸ್ಸಿನ ಜಯಲಲಿತಾ ಆಗಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಚಿತ್ರದ ತಯಾರಿಗಾಗಿ ಸದ್ಯಕ್ಕೆ ಅವರು ಅಮೆರಿಕದ ಲಾಸ್ ಏಂಜಲೀಸ್‌ಗೆ ತೆರಳಿದ್ದಾರೆ.

ಖ್ಯಾತ ಹಾಲಿವುಡ್ ಮೇಕಪ್ ಆರ್ಟಿಸ್ಟ್​ ಜಾಸನ್ ಕೊಲಿನ್ಸ್ 'ತಲೈವಿ' ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. 'ಬ್ಲೆಡ್​ ರನ್ನರ್​​​', 'ಕ್ಯಾಪ್ಟನ್ ಮಾರ್ವೆಲ್​​' ನಂತ ಪ್ರಮುಖ ಹಾಲಿವುಡ್​​ ಸಿನಿಮಾಗಳಿಗೆ ಜಾಸನ್ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಕಂಗನಾಗೆ ಪ್ರೊಸ್ತಟಿಕ್ಸ್ ಗಮ್ ಮೇಕಪ್ ಟೆಸ್ಟ್ ಜರುಗುತ್ತಿದೆ. ಈ ಪೋಟೋಗಳನ್ನು ಕಂಗನಾ ಸಹೋದರಿ ರಂಗೋಲಿ ತಮ್ಮ ಫೇಸ್​​​ಬುಕ್​​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಇದು ಅಂತಹ ಸುಲಭ ಅಲ್ಲ, ಎಷ್ಟೇ ತೊಂದರೆ ಆದರೂ ಸ್ವಲ್ಪವೂ ಕದಲಂತೆ ಕೂರಬೇಕು' ಎಂದು ರಂಗೋಲಿ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಕಂಗನಾ ಭರತನಾಟ್ಯದ ಜೊತೆಗೆ ತಮಿಳು ಭಾಷೆಯನ್ನೂ ಕಲಿಯುತ್ತಿದ್ದಾರಂತೆ. ತಮಿಳು ನಿರ್ದೇಶಕ ಎ.ಎಲ್​. ವಿಜಯ್​​​​ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹಿಂದಿ, ತಮಿಳು ಎರಡೂ ಭಾಷೆಗಳಲ್ಲೂ ಸಿನಿಮಾ ತಯಾರಾಗುತ್ತಿದೆ. ವಿಷ್ಣು ಇಂದೂರಿ ನಿರ್ಮಾಣದ ಈ ಸಿನಿಮಾ ದೀಪಾವಳಿ ನಂತರ ಸೆಟ್ಟೇರಲಿದೆ.

Intro:Body:

kangana makeover

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.