ಹೈದರಾಬಾದ್ : ಬೀದಿಬದಿ ಆಹಾರ ಮಾರಾಟಗಾರನ ವೈರಲ್ ವಿಡಿಯೋ (Viral Video) ನೋಡಿದ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಟೈಗರ್ ಶ್ರಾಫ್ (Bollywood action star Tiger Shroff ) ನಿಬ್ಬೆರಗಾಗಿದ್ದು, ಯಾರಪ್ಪಾ ಈ ವ್ಯಕ್ತಿ ಎಂದು ಕೇಳಿದ್ದಾರೆ.
ರಾಜಸ್ಥಾನದ ಜೈಪುರದ ಬೀದಿಬದಿ ಆಹಾರ ಮಾರಾಟಗಾರನೊಬ್ಬ ಕುದಿಯುತ್ತಿರುವ ಎಣ್ಣೆ ಬಾಣಲಿಯೊಳಗೆ ಕೈ ಹಾಕಿ ಚಿಕನ್ ಫ್ರೈ (Fry Chicken) ತೆಗೆಯುತ್ತಿರುವ 'ಮೋಜ್' ಆ್ಯಪ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುಮಾರು ನಾಲ್ಕು ಮಿಲಿಯನ್ ವೀಕ್ಷಣೆ ಗಳಿಸಿತ್ತು. ಅಲ್ಲದೇ ಆತನಿಗೆ ಯಾವುದೇ ನೋವು, ಗಾಯಗಳಾಗಿರುವುದು ಕಂಡು ಬಂದಿರಲಿಲ್ಲ.
-
Moj kardi India ke IronMan !!! Seriously, who is this guy ?? pic.twitter.com/Wdzkxvskla
— Tiger Shroff (@iTIGERSHROFF) November 12, 2021 " class="align-text-top noRightClick twitterSection" data="
">Moj kardi India ke IronMan !!! Seriously, who is this guy ?? pic.twitter.com/Wdzkxvskla
— Tiger Shroff (@iTIGERSHROFF) November 12, 2021Moj kardi India ke IronMan !!! Seriously, who is this guy ?? pic.twitter.com/Wdzkxvskla
— Tiger Shroff (@iTIGERSHROFF) November 12, 2021
ಈ ವೈರಲ್ ವಿಡಿಯೋವನ್ನು ನಟ ಟೈಗರ್ ಶ್ರಾಫ್ ತಮ್ಮ ಟ್ವಿಟರ್ (Tiger Shroff Twitter) ಖಾತೆಯಲ್ಲಿ ಹಂಚಿಕೊಂಡಿದ್ದು, "ಈ ವ್ಯಕ್ತಿ ಯಾರು? ಮೋಜ್ ಈತನನ್ನು ಭಾರತದ ಉಕ್ಕಿನ ಮನುಷ್ಯನನ್ನಾಗಿ (Iron Man)ಮಾಡಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ಫೋಟೋ ಮುಂದೆ ಶಾಂಪೇನ್ ಬಾಟಲ್ ಓಪನ್..'ಏಕ್ ಲವ್ ಯಾ' ಚಿತ್ರತಂಡದಿಂದ ಪ್ರಮಾದ: ಅಭಿಮಾನಿಗಳ ಆಕ್ರೋಶ
ಇನ್ನು ಟೈಗರ್ ಶ್ರಾಫ್ ತಮ್ಮ ಮುಂಬರುವ 'ಗಣಪತ್' ಸಿನಿಮಾ ಶೂಟಿಂಗ್ಗಾಗಿ ಇಂಗ್ಲೆಂಡ್ಗೆ ತೆರಳಿದ್ದಾರೆ. ಈ ಸಿನಿಮಾ 2022ರ ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ. ಟೈಗರ್ಗೆ ನಾಯಕಿಯಾಗಿ ಕೃತಿ ಸನೋನ್ ಆಯ್ಕೆಯಾಗಿದ್ದಾರೆ.