ಹೈದರಾಬಾದ್ : ಜನಪ್ರಿಯ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ -2 ವೆಬ್ ಸಿರೀಸ್ನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿ ಸಮಂತಾ ಭಾರಿ ಪೂರ್ವ ಸಿದ್ಧತೆ ನಡೆಸಿದ್ದರು.
ಇನ್ನೇನು ಫ್ಯಾಮಿಲಿ ಮ್ಯಾನ್ 2 ಪ್ರಸಾರ ದಿನಾಂಕ ಹತ್ತಿರ ಬರುತ್ತಿದ್ದು, ಶೂಟಿಂಗ್ ತಂಡವು ಈಗಾಗಲೇ ಪ್ರಚಾರ ಕಾರ್ಯ ಕೈಗೊಂಡಿದೆ. ಈ ಸಂಬಂಧ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ, ಈ ಪಾತ್ರದಿಂದ ನಾನು ಎಷ್ಟೋ ನಿದ್ರೆ ರಹಿತ ರಾತ್ರಿಗಳನ್ನು ಕಳೆದಿದ್ದೇನೆ ಎಂದಿದ್ದಾರೆ.
- " class="align-text-top noRightClick twitterSection" data="">
ತಮ್ಮ ಪಾತ್ರವು ನೈಜ ಘಟನೆಯಾಧಾರಿತವಾಗಿರುವುದರಿಂದ ನಾನು ನನ್ನ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸುತ್ತೇನೆ ಅಂತ ಸಮಂತಾ ಹೇಳಿಕೊಂಡಿದ್ದಾರೆ. ಸಂದರ್ಶನದ ವೇಳೆ ಈ ಪಾತ್ರ ತಮ್ಮ ಮನಸ್ಸನ್ನು ಹೇಗೆ ಕದಡಿತು, ಆವರಿಸಿಕೊಂಡಿತ್ತು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.
ಪಾತ್ರದ ತನ್ನ ಸಿದ್ಧತೆಯ ಬಗ್ಗೆ ಮಾತನಾಡುತ್ತಾ, ಸಮಂತಾ ಅವರು ಬಹಳಷ್ಟು ಹೋಮ್ವರ್ಕ್ ಮಾಡಿದ್ದಾರೆ. ಈ ವೆಬ್ ಸರಣಿಯನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದಿದ್ದಾರೆ ಸಮಂತಾ. ರಾಜ್ ಮತ್ತು ಡಿಕೆ ಅವರು ದಿ ಫ್ಯಾಮಿಲಿ ಮ್ಯಾನ್ 2 ಅನ್ನು ಅವರಿಗೆ ನೀಡಿದಾಗ "ಸ್ವಲ್ಪ ಸಮಯದವರೆಗೆ ಮಲಗುವುದಿಲ್ಲ" ಎಂದು ತಿಳಿದಿದ್ದಾಗಿ ಸಮಂತಾ ಹೇಳಿದರು.
ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿ ಮನೋಜ್ ಬಾಜಪೇಯಿ ಪ್ರಿಯಾಮಣಿ ರಾಜ್, ಶರೀಬ್ ಹಶ್ಮಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾ.ರ್, ಶರದ್ ಕೇಲ್ಕರ್, ಸನ್ನಿ ಹಿಂದೂಜಾ ಮತ್ತು ಶ್ರೇಯಾ ಧನ್ವಂತರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಜೂನ್ 4 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.