ETV Bharat / sitara

ಆಕೆ ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾಳೆ?:  ರಿಯಾ ವಿರುದ್ಧ ನಟಿ ಕಾಮ್ಯಾ ಆಕ್ರೋಶ

author img

By

Published : Aug 10, 2020, 1:52 PM IST

ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಸ್ವಲ್ಪ ಸಮಯದ ನಂತರ ಪ್ರತಿಕ್ರಿಯಿಸಿರುವ ಟಿವಿ ನಟ ಕಾಮ್ಯ ಪಂಜಾಬಿ, ಒಡಹುಟ್ಟಿದವರ ಜಗಳ ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

Kamya Punjabi on Rhea Chakraborty's WhatsApp chat
ರಿಯಾ ವಿರುದ್ಧ ನಟಿ ಕಾಮ್ಯಾ ಆಕ್ರೋಶ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್, ರಿಯಾ ಚಕ್ರವರ್ತಿ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಸಹೋದರಿಯನ್ನು ಬೈದಿರುವ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ರಿಯಾ ಹರಿಬಿಟ್ಟಿದ್ದು, ಟಿವಿ ನಟಿ ಕಾಮ್ಯಾ ಪಂಜಾಬಿ, ರಿಯಾ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ, ರಿಯಾ ಸುಶಾಂತ್‌ನೊಂದಿಗಿನ ತನ್ನ ವಾಟ್ಸ್​ಆ್ಯಪ್​ ಚಾಟ್‌ಗಳನ್ನು ಹಂಚಿಕೊಂಡಿದ್ದು, ತನ್ನ ಸಹೋದರಿ ಪ್ರಿಯಾಂಕಾ ಬಗ್ಗೆ ಸುಶಾಂತ್ ಸಿಂಗ್ ದುಷ್ಟೆ, ಮ್ಯಾನಿಪುಲೇಟಿವ್ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮ್ಯ, ಒಡಹುಟ್ಟಿದವರ ಜಗಳ ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

"ಆಕೆ(ರಿಯಾ) ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾಳೆ? ಕ್ರೆಡಿಟ್ ಕಾರ್ಡ್‌ಗಳನ್ನು ನೀವು ಬಳಸಿದ್ದೀರಿ, ಅವರ ಸಹೋದರಿಯಲ್ಲ ಎಂದು ರಿಯಾ ವಿರುದ್ಧ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಅವರ ಅಮೆರಿಕ ಮೂಲದ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಸುಶಾಂತ್ ಅವರ ಹಳೆಯ ಸಂದರ್ಶನದ ಎರಡು ಸಣ್ಣ ತುಣುಕುಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪ್ರಿಯಾಂಕಾ ಅವರನ್ನು ಹೊಗಳಿರುವ ತುಣುಕು ಶೇರ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.