ETV Bharat / sitara

ಬಾಲಿವುಡ್​ ಡ್ರಗ್ಸ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ನಟ ಯುವರಾಜ್​​​​​​

ಬಹುತೇಕ ಬಾಲಿವುಡ್​​ನಲ್ಲಿ ನಟ, ನಟಿಯರು ಕೋಕೇನ್​​ಗೆ ದಾಸರಾಗಿದ್ದಾರೆ. ಈಗ ಬಾಲಿವುಡ್​​ನಲ್ಲಿ ವೀಡ್​ ಸಾಮಾನ್ಯವಾಗಿಹೋಗಿದೆ. ಅದೂ ಕೂಡಾ ಒಂದು ರೀತಿಯ ಡ್ರಗ್ಸ್​​​, ಕ್ಯಾಮರಾಮ್ಯಾನ್​​ನಿಂದ ಹಿಡಿದು ಟೆಕ್ನೀಷಿಯನ್​​​​​ವರೆಗೂ ಸೆಟ್​​​​ನಲ್ಲಿ ವೀಡ್ ಸೇವಿಸುತ್ತಾರೆ ಎಂದು ಸುಶಾಂತ್​​​ ಸಿಂಗ್ ಆಪ್ತ ಯುವರಾಜ್ ಹೇಳಿದ್ದಾರೆ.

bollywood drug racket
ಬಾಲಿವುಡ್​ ಡ್ರಗ್ಸ್​​ ಪ್ರಕರಣ
author img

By

Published : Sep 15, 2020, 8:06 AM IST

ಒಂದೆಡೆ ಸ್ಯಾಂಡಲ್​ವುಡ್​​ನಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದರೆ ಮತ್ತೊಂದೆಡೆ ಬಾಲಿವುಡ್​​​​ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಡ್ರಗ್ಸ್​​ ಮಾಫಿಯಾ ನಂಟು ಇರುವ ಪ್ರಕರಣವನ್ನು ಎನ್​​ಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಶಾಂತ್ ಆಪ್ತ ಸ್ನೇಹಿತ ನಟ, ನಿರ್ಮಾಪಕ ಯುವರಾಜ್​.ಎಸ್, ಬಾಲಿವುಡ್ ಮಾತ್ರವಲ್ಲ, ಇಡೀ ಚಿತ್ರರಂಗದಲ್ಲೇ ಈ ಮಾದಕ ದ್ರವ್ಯ ಜಾಲ ಆವರಿಸಿದ್ದು ಬಹುತೇಕ ನಟ,ನಟಿಯರು ಕೋಕೇನ್​​ಗೆ ದಾಸರಾಗಿದ್ದಾರೆ ಎಂಬ ಶಾಕಿಂಗ್ ವಿಚಾರವನ್ನು ಬಾಯ್ಪಿಟ್ಟಿದ್ದಾರೆ. ಈ ಡ್ರಗ್ಸ್ ಪ್ರಕರಣ ಇಂದು ನಿನ್ನೆಯದಲ್ಲ 1970ರಿಂದಲೂ ಚಿತ್ರರಂಗಕ್ಕೂ ಡ್ರಗ್ಸ್​​​ಗೂ ನಂಟಿದೆ. ಆದರೆ ಆಗ ಪರಿಸ್ಥಿತಿ ಬೇರೆಯದಾಗಿತ್ತು, ಈಗಲೇ ಬೇರೆ. ಆಗ ಈ ವಿಚಾರ ವೈರಲ್ ಆಗಲು ಯಾವುದೇ ಸೋಷಿಯಲ್ ಮೀಡಿಯಾ ಇರಲಿಲ್ಲ. ಈಗ ಸೋಷಿಯಲ್ ಮೀಡಿಯಾ ಮೂಲಕವೇ ಇಂತ ವಿಚಾರಗಳು ಎಲ್ಲರಿಗೂ ತಿಳಿಯುತ್ತಿವೆ.

ಚಿತ್ರರಂಗದಲ್ಲಿ ಸಾಕಷ್ಟು ನಟ, ನಟಿಯರು, ಫಿಲ್ಮ್​​ ಮೇಕರ್​​ಗಳು ಕೋಕೇನ್ ಸೇವಿಸಿ ಪ್ರತಿದಿನ ತಿರುಗಾಡುತ್ತಿದ್ದಾರೆ. ಬಹುತೇಕರು ಇತರ ಡ್ರಗ್ಸ್​​ ಸೇವಿಸುತ್ತಿದ್ದಾರೆ. ವೀಡ್​​, ಈಗ ಸಿಗರೇಟ್​​​ನಂತೆ ಸಾಮಾನ್ಯವಾಗಿಹೋಗಿದೆ. ಕ್ಯಾಮರಾಮ್ಯಾನ್​​ನಿಂದ ಹಿಡಿದು ತಂತ್ರಜ್ಞರವರೆಗೆ ಎಲ್ಲರೂ ಅದನ್ನು ಸೆಟ್​​​​ನಲ್ಲೇ ಸೇವಿಸುತ್ತಾರೆ. ಇನ್ನು ಬಾಲಿವುಡ್​​​ ಬಹುತೇಕ ಪಾರ್ಟಿಗಳಲ್ಲಿ ಕೋಕೋನ್ ಇದ್ದೇ ಇರುತ್ತದೆ. ಇದರೊಂದಿಗೆ ಎಂಡಿಎಂಎ, ಎಲ್​​​ಎಸ್​ಡಿ, ಕೆಟಮೈನ್​​​ ಸೇರಿ ಅನೇಕ ರೀತಿಯ ಡ್ರಗ್ಸ್​​​ಗಳನ್ನು ಇಲ್ಲಿ ಬಳಸಲಾಗುತ್ತಿದೆ. 15-20 ಗಂಟೆಗಳವರೆಗೆ ಈ ಡ್ರಗ್ಸ್​​ ದೇಹದಲ್ಲಿ ಕೆಲಸ ಮಾಡುತ್ತಿರುತ್ತದೆ. ಇನ್ನು ಕೋಕೇನ್ ಅವಧಿ 5-8 ಗಂಟೆ ಇರುತ್ತದೆ. ಇದೆಲ್ಲಾ ಕೊನೆಯಾಗಬೇಕು, ಇಲ್ಲದಿದ್ದರೆ ಇದೇ ಚಟದಿಂದ ಎಲ್ಲರೂ ಸಾಯುತ್ತಾರೆ ಎಂದು ಯುವರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ನನಗೂ ಕೂಡಾ ಸಾಕಷ್ಟು ಬಾರಿ ಡ್ರಗ್ಸ್ ಸೇವಿಸುವಂತೆ ಆಹ್ವಾನಿಸಲಾಗಿದೆ, ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ಡ್ರಗ್ಸ್ ಸೇವಿಸಿಯೇ ಪಾರ್ಟಿಗೆ ಹಾಜರಾಗುತ್ತಾರೆ. ಡ್ರಗ್ಸ್ ದಂಧೆಯನ್ನೇ ಹಲವರು ಉದ್ಯೋಗವನ್ನು ಮಾಡಿಕೊಂಡು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಕಳೆದ ವರ್ಷ ಬಾಲಿವುಡ್ ಫಿಲ್ಮ್​ ಮೇಕರ್ ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯ ವಿಡಿಯೋವೊಂದು ವೈರಲ್ ಆಗಿತ್ತು. ಇದು ಕೂಡಾ ಡ್ರಗ್​​ ಪಾರ್ಟಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ದೀಪಿಕಾ ಪಡುಕೋಣೆ, ರಣಬೀರ್ ಸಿಂಗ್, ಮಲೈಕಾ ಅರೋರ, ವಿಕಿ ಕೌಶಲ್, ವರುಣ್ ಧವನ್, ಶಾಹಿದ್ ಕಪೂರ್, ಅರ್ಜುನ್ ಕಪೂರ್ ಹಾಗೂ ಇನ್ನಿತರರು ಈ ಪಾರ್ಟಿಯಲ್ಲಿ ಇದ್ದರು.

ಬಾಲಿವುಡ್​​​ನಲ್ಲಿ ದೊಡ್ಡ ಹೆಸರು ಮಾಡಿರುವ ಟಾಪ್​​​​ 15 ಮಂದಿ ಡ್ರಗ್ಸ್​​​​​ ಸೇವಿಸುತ್ತಾರೆ ಎಂಬ ವಿಚಾರ ನನಗೆ ಚೆನ್ನಾಗಿ ಗೊತ್ತು. ಆದರೆ ಇದನ್ನು ಪೊಲೀಸರ ಮುಂದೆ ಹೇಳಲು ಸೂಕ್ತ ಫೋಟೋಗಳಾಗಲೀ, ವಿಡಿಯೋ ಆಗಲಿ ಬೇಕು. ಇದ್ಯಾವುದೂ ನನ್ನ ಬಳಿ ಇಲ್ಲ. ಒಂದು ವೇಳೆ ನಾನು ಅವರ ಹೆಸರನ್ನು ಬಹಿರಂಗಪಡಿಸಿದರೆ ಅವರು ಖಂಡಿತ ನನ್ನನ್ನು ಬಿಡುವುದಿಲ್ಲ, ಅವರ ಕೋಪಕ್ಕೆ ಗುರಿಯಾಗಲು ನನಗೆ ಇಷ್ಟವಿಲ್ಲ ಎಂದು ಯುವರಾಜ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.