ಮುಂಬೈ (ಮಹಾರಾಷ್ಟ್ರ): ಇಂದು ನಟಿ ಅಮೃತಾ ಸಿಂಗ್ ಅವರ ಜನ್ಮದಿನ. ಈ ದಿನದ ಹಿನ್ನೆಲೆ ಮಗಳು ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ತಾಯಿ ಬಗ್ಗೆ ಸಾರಾ, ಹುಟ್ಟು ಹಬ್ಬದ ಶುಭಾಶಯಗಳು ಮಮ್ಮಿ ಎಂದು ಬರೆದುಕೊಂಡಿದ್ದು, ಸಾರಾ ತನ್ನ ಜೊತೆ ತಾಯಿಯ ಹಳೆ ಫೋಟೋಗಳನ್ನು ಸಂಗ್ರಹಿಸಿ ವಿಶೇಷ ಪೋಸ್ಟ್ ಹಾಕಿಕೊಂಡಿದ್ದಾರೆ. ಥೇಟ್ ತಾಯಿ ಅಮೃತಾ ಸಿಂಗ್ ಅವರಂತೆ ಸಾರಾ ಕಂಗೊಳಿಸುತ್ತಿದ್ದಾರೆ.
ಸಾರಾ ಅಲಿ ಖಾನ್ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮಗಳು. 1991ರಲ್ಲಿ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮದುವೆಯಾಗಿದ್ದು 2004 ರಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ಮೂಲಕ ತಮ್ಮ 13 ವರ್ಷಗಳ ಸಂಬಂಧಕ್ಕೆ ಕೊನೆ ಹಾಡಿದ್ದರು.
ಇನ್ನು ಅಮೃತಾ ಸಿಂಗ್ ಅವರು ಮಾಜಿ ಪತಿ ಸೈಫ್ ಅಲಿ ಖಾನ್ ಅವರಿಂದ ಇಬ್ರಾಹಿಂ ಅಲಿ ಖಾನ್ ಎಂಬ ಮಗನನ್ನು ಹೊಂದಿದ್ದು, ಸದ್ಯ ಎಲ್ಲರೂ ಆಪ್ತರಾಗಿಯೇ ಇದ್ದಾರೆ. ಪುತ್ರಿ ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಗುರುಸಿಕೊಂಡಿದ್ದಾರೆ.