ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಭಾನುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ರಜೆ ಮುಗಿಸಿ ಮತ್ತೆ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುತ್ತಿದ್ದ ತಮ್ಮ ಮಗ ಅರ್ಹಾನ್ ಖಾನ್ಗೆ ಬೀಳ್ಕೊಡುಗೆ ನೀಡಲು ಇವರಿಬ್ಬರೂ ಏರ್ಪೋರ್ಟ್ಗೆ ಬಂದಿದ್ದರು.
ಪುತ್ರ ಅರ್ಹಾನ್ ಅನ್ನು ನಟಿ ಮಲೈಕಾ ಮತ್ತು ನಟ ಅರ್ಬಾಜ್ ಇಬ್ಬರೂ ಗಟ್ಟಿಯಾಗಿ ಅಪ್ಪಿಕೊಂಡು ಬೈ ಹೇಳಿದರು. ಮಗನ ನಿರ್ಗಮನದ ಬಳಿಕ ಅರ್ಬಾಜ್ ಜೊತೆ ಸಂಭಾಷಣೆಯಲ್ಲಿ ತೊಡಗಿದ ಮಲೈಕಾ ಕೊನೆಯಲ್ಲಿ ಮಾಜಿ ಪತಿಯನ್ನು ತಬ್ಬಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ; ಮದುವೆಗೂ ಮುನ್ನವೇ 4 ಮಕ್ಕಳ ತಂದೆಯಾದ ಫುಟ್ಬಾಲ್ ದಿಗ್ಗಜ!
ಡಿಸೆಂಬರ್ ಆರಂಭದಲ್ಲಿ ರಜೆಯ ಮೇರೆಗೆ ವಿದೇಶದಿಂದ ಬಂದಿದ್ದ ವೇಳೆಯೂ ಅರ್ಹಾನ್ ಖಾನ್ನನ್ನು ಬರಮಾಡಿಕೊಳ್ಳಲು ಮಲೈಕಾ ಮತ್ತು ಅರ್ಬಾಜ್ ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. 2016 ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ತಮ್ಮ 19 ವರ್ಷದ ವಿವಾಹ ಜೀವನಕ್ಕೆ ಗುಡ್ಬೈ ಹೇಳಿದ್ದರು. ಆ ಬಳಿಕ ಅರ್ಬಾಜ್ ಮಾಡೆಲ್ ಹಾಗೂ ನಟಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಮಲೈಕಾ ಅವರು ತಮಗಿಂತ ಕಿರಿಯ ವಯಸ್ಸಿನ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ.