ETV Bharat / sitara

ಎಕ್ಸಿಟ್​ ಪೋಲ್​ 'ಐಶ್ವರ್ಯ ಮೀಮ್'​ ವಿವಾದ... ಕೈ ಮುಗಿದು ಕ್ಷಮೆ ಕೇಳಿದ ನಟ ವಿವೇಕ್​ !

author img

By

Published : May 21, 2019, 11:26 AM IST

Updated : May 21, 2019, 12:29 PM IST

ನಟಿ ಐಶ್ವರ್ಯ ರೈ ಫೋಟೋ ಬಳಸಿ ಮಾಡಲಾಗಿದ್ದ ಮೀಮ್​ ವಿವೇಕ್​ ತಮ್ಮ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದು ಭಾರಿ ಟೀಕೆಗೆ ಗುರಿಯಾದ ನಂತರ ವಿವೇಕ್​ ಅವರು ಕ್ಷಮೆ ಯಾಚಿಸಿದ್ದಾರೆ.

ಚಿತ್ರಕೃಪೆ : ANI

ನವದೆಹಲಿ : ತೀವ್ರ ವಿರೋಧದ ಹಿನ್ನೆಲೆ ಬಾಲಿವುಡ್ ನಟ ವಿವೇಕ್ ಒಬೆರಾಯ್​ ತಾವು ಮಾಡಿದ ಪ್ರಮಾದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಮತದಾನೋತ್ತರ ಸಮೀಕ್ಷೆಗಳ ಕುರಿತು ನಿನ್ನೆ ಸಾಕಷ್ಟು ಮೀಮ್ಸ್​, ಟ್ರೋಲ್​ಗಳು ಹರಿದಾಡಿದ್ದವು. ಅವುಗಳ ಪೈಕಿ ನಟಿ ಐಶ್ವರ್ಯ ರೈ ಫೋಟೋ ಬಳಸಿ ಮಾಡಲಾಗಿದ್ದ ಮೀಮ್​ ವಿವೇಕ್​ ತಮ್ಮ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್​ನಲ್ಲಿ ಮೋಹಕ ತಾರೆ ಐಶ್ವರ್ಯ ರೈ ಮೊದಲಿಗೆ ಸಲ್ಮಾನ್​ ಜತೆ, ನಂತರ ವಿವೇಕ್​ ಒಬೆರಾಯ್​, ಕೊನೆಗೆ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಜತೆ ಇರುವ ಚಿತ್ರಗಳನ್ನು ಮರ್ಜ್​ ಮಾಡಿಲಾಗಿದ್ದು, ಈ ಚಿತ್ರಗಳ ಎದುರು ಅನುಕ್ರಮವಾಗಿ opinion poll,exit poll ಹಾಗೂ result poll ಎಂದು ಬರೆಯಲಾಗಿತ್ತು.

  • Even if one woman is offended by my reply to the meme, it calls for remedial action. Apologies🙏🏻 tweet deleted.

    — Vivek Anand Oberoi (@vivekoberoi) May 21, 2019 " class="align-text-top noRightClick twitterSection" data=" ">

ಎಕ್ಸಿಟ್ ಪೋಲ್​ ವರದಿಗಳು ಪ್ರಕಟವಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಈ ಮೀಮ್​ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನೇ ತಮ್ಮ ಅಧಿಕೃತ ಟ್ವಿಟ್ಟರ್​​ನಲ್ಲಿ ಶೇರ್ ಮಾಡಿದ್ದ ವಿವೇಕ್​ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದರು. ಒಬ್ಬ ಹೆಣ್ಣು ಮಗಳನ್ನು, ಅದರಲ್ಲೂ ನೀವೂ ನಟರಾಗಿ ಮತ್ತೋರ್ವ ನಟಿಯನ್ನು ಈ ರೀತಿ ಟ್ರೋಲ್​ಗೆ ಬಳಸುವುದು ಎಷ್ಟು ಸರಿ? ನೀವು ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ತಮ್ಮ ಪೋಸ್ಟ್​​ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಇಂದು ಮುಂಜಾನೆ ಟ್ವಟ್ಟರ್​​ನಿಂದ ಆ ಪೋಸ್ಟ್ ಡಿಲೀಟ್ ಮಾಡಿರುವ ಒಬೆರಾಯ್​, ನನ್ನ ಟ್ವೀಟ್​ನಿಂದ ಯಾವುದಾದರೂ ಮಹಿಳೆಗೆ ನೋವಾಗಿದ್ದರೆ ಕ್ಷಮಿಸಿ ಎಂದು ಟ್ವಿಟ್ಟಿಸಿದ್ದಾರೆ.

ಮತ್ತೊಂದು ಟ್ವಿಟ್​ನಲ್ಲಿ 10 ವರ್ಷಗಳಲ್ಲಿ 2000 ದುರ್ಬಲ ಹೆಣ್ಣುಮಕ್ಕಳಿಗೆ ಕಾಯಕಲ್ಪ ನೀಡಿದ್ದೇನೆ. ಇದುವರೆಗೆ ಯಾವೊಂದು ಹೆಣ್ಣು ಮಗಳಿಗೂ ನಾನು ಅಗೌರವ ತೋರಿಲ್ಲ ಎಂದಿದ್ದಾರೆ.

Intro:Body:Conclusion:
Last Updated : May 21, 2019, 12:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.