ಮುಂಬೈ: ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಇನ್ನೊಂದೆಡೆ ಕೊರೊನಾದಿಂದ ಜನರು ಹತ್ತು ಹಲವು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮ ವಿಶೇಷ ಕ್ಯಾಂಪೇನ್ ಶುರು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನುಷ್ಕಾ, "ಕೊರೊನಾ ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಎದುರಿಸೋಣ" ಎಂದಿದ್ದಾರೆ.
-
We shall all overcome this crisis together. Please step forward to support India and Indians. Your contribution will help in saving lives during this critical time.
— Anushka Sharma (@AnushkaSharma) May 7, 2021 " class="align-text-top noRightClick twitterSection" data="
Click on https://t.co/XTuqyHsJi4 to make an impact.
Mask up! Stay home! Stay safe! 🇮🇳
">We shall all overcome this crisis together. Please step forward to support India and Indians. Your contribution will help in saving lives during this critical time.
— Anushka Sharma (@AnushkaSharma) May 7, 2021
Click on https://t.co/XTuqyHsJi4 to make an impact.
Mask up! Stay home! Stay safe! 🇮🇳We shall all overcome this crisis together. Please step forward to support India and Indians. Your contribution will help in saving lives during this critical time.
— Anushka Sharma (@AnushkaSharma) May 7, 2021
Click on https://t.co/XTuqyHsJi4 to make an impact.
Mask up! Stay home! Stay safe! 🇮🇳
7 ಕೋಟಿ ರೂ. ಹಣ ಸಂಗ್ರಹಿಸುವ ಗುರಿ ಹೊಂದಿರುವ ದಂಪತಿ, ಈಗಾಗಲೇ 2 ಕೋಟಿ ರೂ.ನ್ನು ದೇಣಿಗೆಯಾಗಿ ನೀಡಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಈ ಹಣದ ಮೂಲಕ ಪರಿಹಾರ ಕಲ್ಪಿಸುವ ಉದ್ದೇಶವನ್ನು ದಂಪತಿ ಹೊಂದಿದ್ದಾರೆ.
ಈ ಹಿಂದೆ ಕ್ಯಾಂಪೇನ್ ಆರಂಭಕ್ಕೂ ಮುನ್ನ ಮಾತನಾಡಿದ್ದ ಅನುಷ್ಕಾ, "ನನ್ನ ಹುಟ್ಟುಹಬ್ಬದಂದು ಶುಭಾಶಯ ಸಲ್ಲಿಸಿದ ಎಲ್ಲರಿಗೂ ಧನ್ಯವಾದ. ಕೊರೊನಾದಿಂದ ದೇಶ ಸಂಕಷ್ಟ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಇಚ್ಛಿಸುವುದಿಲ್ಲ" ಎಂದು ಹೇಳಿದ್ದರು.
ದೇಶದಲ್ಲಿ ಗುರುವಾರದಂದು ಒಂದೇ ದಿನ ಹೊಸದಾಗಿ 4,14,188 ಸೋಂಕಿತರು ಪತ್ತೆಯಾಗಿದ್ದಾರೆ. 3,915 ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿನ ಕೋವಿಡ್ ಕೇಸ್ಗಳ ಸಂಖ್ಯೆ 2,14,91,598ಕ್ಕೆ ಹಾಗೂ ಮೃತರ ಸಂಖ್ಯೆ 2,34,083ಕ್ಕೆ ಏರಿಕೆಯಾಗಿದೆ.