ಹೈದರಾಬಾದ್ (ತೆಲಂಗಾಣ): ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ನಡುವೆ ಮೊನ್ನೆಯಷ್ಟೇ ಅದ್ಧೂರಿ ವಿವಾಹ ಕಾರ್ಯ ಜರುಗಿತು. ಇದರ ಬೆನ್ನಲ್ಲೇ ಈಗ ವಿಕ್ಕಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.
ಕತ್ರಿನಾ ಜೊತೆಗಿನ ಮದುವೆಗೆ ಸಜ್ಜಾಗುವ ಮೊದಲು ವಿಕ್ಕಿ ಅವರು ಸಾರಾ ಅವರ ಜೊತೆಗೆ ಮುಂಬರುವ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದರು. ಇನ್ನೂ ಹೆಸರಿಡದ ಈ ಚಿತ್ರವು ಲಕ್ಷ್ಮಣ್ ಉಟೇಕರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ದಿನೇಶ್ ವಿಜನ್ ಅವರ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸುತ್ತಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ಸನ್ನಿ ಲಿಯೋನ್ಗೆ ಎಚ್ಚರಿಕೆ ನೀಡಿದ ಮಧ್ಯಪ್ರದೇಶ ಸಚಿವ
ವಿಕ್ಕಿ-ಸಾರಾ ಅವರ ಈ ಚಲನಚಿತ್ರದ ಹೆಸರನ್ನು ಮುಚ್ಚಿಟ್ಟಿರುವ ಬೆನ್ನಲ್ಲೇ ಈಗ ಇವರಿಬ್ಬರೂ ಬೈಕ್ನಲ್ಲಿ ತೆರಳಿದ್ದ ಚಿತ್ರ ಎಲ್ಲೆಡೆ ವೈರಲ್ ಆಗಿದೆ. ಫೋಟೋದಲ್ಲಿ ವಿಕ್ಕಿ ಬೈಕ್ ಸವಾರಿ ಮಾಡುತ್ತಿದ್ದರೆ, ಸಾರಾ ಸೀರೆ ಉಟ್ಟು ಹಿಂದೆ ಕುಳಿತಿರುವುದು ಕಂಡುಬರುತ್ತದೆ.