ಹೈದರಾಬಾದ್ (ತೆಲಂಗಾಣ): ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ ‘ಲೈಗರ್’ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧರಾಗುತ್ತಿದ್ದಾರೆ. ಚಿತ್ರದ OTT ಹಕ್ಕು ಭಾರಿ ಬೆಲೆಗೆ ಮಾರಾಟವಾಗುತ್ತಿವೆ ಎಂದು ವರದಿಯಾಗಿದೆ.
- " class="align-text-top noRightClick twitterSection" data="">
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್ ಚಿತ್ರದ OTT ಹಕ್ಕಿಗಾಗಿ ಡಿಸ್ನಿ+ ಹಾಟ್‌ಸ್ಟಾರ್ 65 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎಂದು ಹೇಳಲಾಗ್ತಿದೆ. ಈ ವರದಿ ಏನಾದರೂ ನಿಜವಾಗಿದ್ದರೆ, ಇದು ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ ಅತಿದೊಡ್ಡ OTT ಒಪ್ಪಂದವಾಗಿದೆ. ಹಕ್ಕಿಗಾಗಿ ಇಷ್ಟು ದೊಡ್ಡ ಮೊತ್ತವನ್ನು ಕ್ಲೈಮ್ ಮಾಡಿರುವುದರಿಂದ ಚಿತ್ರದ ಬಿಡುಗಡೆಯತ್ತಾ ಇದೀಗ ಎಲ್ಲಾರ ಚಿತ್ತ ಇದೆ.
ಇದನ್ನೂ ಓದಿ: ಐಟಿಬಿಪಿ ಸಿಬ್ಬಂದಿಯೊಂದಿಗೆ ವಾಲಿಬಾಲ್ ಆಡಿದ ಅಕ್ಷಯ್ ಕುಮಾರ್: ವಿಡಿಯೋ ವೈರಲ್
ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಅವರು ನಿರ್ದೇಶಿಸಿದ ಈ ಸಿನಿಮಾವು ಮುಂಬೈನ ಬೀದಿಗಳಿಂದ ನೇರವಾಗಿ MMA ಫೈಟರ್ ಆಗುವ ದುರ್ಬಲ ವ್ಯಕ್ತಿಯನ್ನು ಕುರಿತದ್ದಾಗಿದೆ. ಆಗಸ್ಟ್ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಅಮೆರಿಕದ ಮಾಜಿ ವೃತ್ತಿಪರ ಬಾಕ್ಸರ್ ಮೈಕ್ ಟೈಸನ್, ಮಕರಂದ್ ದೇಶಪಾಂಡೆ, ರೋನಿತ್ ರಾಯ್, ರಮ್ಯಾ ಕೃಷ್ಣನ್ ಮತ್ತು ಇತರರು ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈಗರ್ ಅನ್ನು ಪುರಿ ಜಗನ್ನಾಥ್, ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸಿದ್ದಾರೆ.