ಕನ್ನಡ, ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ ಸಾಕಷ್ಟು ನಟ-ನಟಿಯರು ಬಾಲಿವುಡ್ನಲ್ಲಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಬಾಹುಬಲಿ ನಂತರ ಪ್ರಭಾಸ್ 'ಸಾಹೋ' ಹಿಂದಿ ಸಿನಿಮಾದಲ್ಲಿ ನಾಯಕನ ಸ್ಥಾನ ಗಳಿಸಿದ್ದರು.ಇದೀಗ ನಟ ವಿಜಯ್ ದೇವರಕೊಂಡ ಕೂಡಾ ಬಾಲಿವುಡ್ಗೆ ಹಾರಿದ್ದಾರೆ.
![Fighter Muhurtham](https://etvbharatimages.akamaized.net/etvbharat/prod-images/5774786_vij.jpg)
ಇನ್ನು ವಿಜಯ್ ದೇವರಕೊಂಡ ನಟಿಸುತ್ತಿರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ 'ಫೈಟರ್' ಎಂದು ಹೆಸರಿಡಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪೂರಿ ಕನೆಕ್ಟ್ ಬ್ಯಾನರ್ ಅಡಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಈ ಸಿನಿಮಾವನ್ನು ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಬಾಲಿವುಡ್ ಪ್ರಮುಖ ಚಿತ್ರ ನಿಮಾತೃ ಕರಣ್ ಜೋಹರ್ ಕೂಡಾ ಈ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಪ್ರಮುಖ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾಗಾಗಿ ವಿಜಯ್ ಥಾಯ್ಲೆಂಡ್ಗೆ ತೆರಳಿ ಮಾರ್ಷಲ್ ಆರ್ಟ್ ಕಲಿತಿದ್ದಾರಂತೆ. ರಮ್ಯಕೃಷ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ಅನನ್ಯ ಪಾಂಡೆ ನಟಿಸುತ್ತಿದ್ದರೆ ವಿಲನ್ ಆಗಿ ರೌನಿತ್ ರಾಯ್ ನಟಿಸುತ್ತಿದ್ದಾರೆ.
-
To new beginnings 💖
— Charmme Kaur (@Charmmeofficial) January 20, 2020 " class="align-text-top noRightClick twitterSection" data="
Shoot begins in mumbai from today 💪🏻@TheDeverakonda @purijagan @karanjohar @PuriConnects @DharmaMovies #VD10 #PJ37 #PCfilm #PanIndia 😍 pic.twitter.com/g8MOAk9EQY
">To new beginnings 💖
— Charmme Kaur (@Charmmeofficial) January 20, 2020
Shoot begins in mumbai from today 💪🏻@TheDeverakonda @purijagan @karanjohar @PuriConnects @DharmaMovies #VD10 #PJ37 #PCfilm #PanIndia 😍 pic.twitter.com/g8MOAk9EQYTo new beginnings 💖
— Charmme Kaur (@Charmmeofficial) January 20, 2020
Shoot begins in mumbai from today 💪🏻@TheDeverakonda @purijagan @karanjohar @PuriConnects @DharmaMovies #VD10 #PJ37 #PCfilm #PanIndia 😍 pic.twitter.com/g8MOAk9EQY