ಹೈದರಾಬಾದ್: ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರನ್ನು (9 ಡಿಸೆಂಬರ್ 2021) ವಿವಾಹವಾದಾಗಿನಿಂದ ಪ್ರತಿದಿನ ಸುದ್ದಿ ಕೊಡುತ್ತಿದ್ದಾರೆ. ಇಂದು ಸಹ ಮಗದೊಂದು ಸುದ್ದಿಯೊಂದಿಗೆ ಸದ್ದು ಮಾಡುತ್ತಿದ್ದಾರೆ.
ವಿಕ್ಕಿ ಸದ್ಯ ಇಂದೋರ್‌ನಲ್ಲಿ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದು ಒಂದಲ್ಲ ಒಂದು ಸುದ್ದಿಯೊಂದಿಗೆ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಕತ್ರಿನಾ ಸಹ ಅವರೊಂದಿಗೆ ಒಂದು ವಾರ ಉಳಿದುಕೊಂಡು ಮತ್ತೆ ಮುಂಬೈಗೆ ವಾಪಸಾಗಿದ್ದು ಪತ್ನಿಯನ್ನು ಬಿಟ್ಟಿರಲಾರದೆ ವಿಕ್ಕಿ ಅದೇ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಇಂದು ಬೆಳಗ್ಗೆ ಚಿತ್ರೀಕರಣ ನಿಮಿತ್ತ ಸ್ಪಾಟ್ಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ವಿಕ್ಕಿ ಕೌಶಲ್, ಬಾರ್ಬಿ ಡಾಲ್ ಗುಂಗಿನಲ್ಲಿ ಹಾಡು ಹಾಡಿ ತಮ್ಮ ವಿರಹ ವೇದನೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ತಮ್ಮ ಕಾರಿನಲ್ಲಿ ಕುಳಿತ ಅವರು ಪತ್ನಿ ಕತ್ರಿನಾ ಕೈಫ್ ನೆನಪಿನಲ್ಲಿ ಸನ್ಸನ್ ಕಿ ಮಾಲಾ, ಮೇ ಸಿಮ್ರು ಮೇ ತೇರಾ ನಾಮ್.. ಹಾಡೊಂದರ ಸಾಲು ಗುನುಗಿದ್ದಾರೆ. ಮುಂಜಾನೆಯ ಮಂಜು ಮತ್ತು ಮನಸ್ಸಿಗೆ ಹಿತ ನೀಡುವ ಚಳಿಯು ಪತ್ನಿಯನ್ನು ನೆನಪು ಮಾಡಿರಬಹುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಮದುವೆಯಾದ ಬಳಿಕ ತಮ್ಮ ಮೊದಲ ಲೋಹ್ರಿಯನ್ನು ಇಂದೋರ್‌ನಲ್ಲಿ ಆಚರಿಸುವ ಮೂಲಕ ಗಮನ ಸೆಳೆದಿದ್ದರು. ತಿಂಗಳ ವಿವಾಹ ಸಂಭ್ರಮವನ್ನು ಸಹ ಆಚರಿಸಿಕೊಂಡ ಅವರು ತಮ್ಮ ಹಬ್ಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ಅಮಿತಾಬ್ ಪೋಸ್ಟ್‌ಗೆ ‘ಬಾಸ್ ಈಸ್ ಔಟ್’ ಎಂದು ಗಂಗೂಲಿ ಕಮೆಂಟ್: ಇದಕ್ಕೆ ಬಚ್ಚನ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?