ಹೈದರಾಬಾದ್ : ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿವೆ. ಈ ಬಗ್ಗೆ ಇಬ್ಬರೂ ದೃಢಪಡಿಸಿರಲಿಲ್ಲ. ಇದೀಗ ವಿಕ್ಕಿ ತಾವು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.
- " class="align-text-top noRightClick twitterSection" data="
">
'ಸರ್ದಾರ್ ಉದಮ್' ಸಿನಿಮಾ ಪ್ರಚಾರದ ವೇಳೆ ಕತ್ರಿನಾರೊಂದಿಗೆ ಅವರ ನಿಶ್ಚಿತಾರ್ಥದ ವದಂತಿಗಳ ಬಗ್ಗೆ ವಿಕ್ಕಿಗೆ ಮಾಧ್ಯಮದವರಿಂದ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಅವರು, "ನಿಮ್ಮ ಸ್ನೇಹಿತರೇ ಈ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ.
ಒಳ್ಳೆ ಸಮಯ ನೋಡಿ ಆದಷ್ಟು ಬೇಗ ಎಂಗೇಜ್ಮೆಂಟ್ ಮಾಡಿಕೊಳ್ಳುವೆ. ಅದಕ್ಕೂ ಸಮಯ ಬರಲಿದೆ" ಎಂದು ಹೇಳಿದ್ದಾರೆ. ಆದರೆ, ಇಲ್ಲೂ ಕೂಡ ಕತ್ರಿನಾ ಕೈಫ್ ಜತೆಯಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆ ಎಂದು ವಿಕ್ಕಿ ಹೇಳಿಲ್ಲ.
- " class="align-text-top noRightClick twitterSection" data="
">
ಇದನ್ನೂ ಓದಿ: ಸರ್ದಾರ್ ಉದಮ್ ಸಿನಿಮಾದಲ್ಲಿನ ವಿಕ್ಕಿ ಕೌಶಲ್ ಅಭಿನಯಕ್ಕೆ ಕತ್ರಿನಾ ಕೈಫ್ ಫಿದಾ!
ನಿನ್ನೆಯಷ್ಟೇ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಅಭಿನಯದ 'ಸರ್ದಾರ್ ಉದಮ್' ಸಿನಿಮಾ ಬಿಡುಗಡೆಯಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಕತ್ರಿನಾ ಕೂಡ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಇತ್ತ ಕತ್ರಿನಾ ಸಲ್ಮಾನ್ ಖಾನ್ ಜತೆ ಮುಂಬರುವ ಚಿತ್ರ 'ಟೈಗರ್ 3'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.