ಮುಂಬೈ (ಮಹಾರಾಷ್ಟ್ರ): ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ನ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಧರ್ಮ ಪ್ರೊಡಕ್ಷನ್ಸ್ ಸಿಇಒ ಅಪೂರ್ವ ಮೆಹ್ತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಈ ಜೋಡಿ ಪಾರ್ಟಿಗೆ ಬರುವ ವೇಳೆ ಕೈ ಕೈ ಹಿಡಿದುಕೊಂಡು ಆಗಮಿಸುವ ಮೂಲಕ ನೆರದಿದ್ದವರ ಗಮನ ಸೆಳೆದರು.
- " class="align-text-top noRightClick twitterSection" data="
">
ಕತ್ರಿನಾ ಹಾಟ್ ಬ್ಲೂ ಡ್ರೆಸ್ ಜೊತೆಗೆ ಮಿನುಗುವ ಕಪ್ಪು ಹೈ ಹೀಲ್ಸ್ ಧರಿಸಿದ್ದರೆ ಪತಿ ವಿಕೆ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಪ್ಯಾಂಟ್, ಶರ್ಟ್ ಜೊತೆಗೆ ಹೂವಿನ ಚಿತ್ರವಿರುವ ಕಪ್ಪು ಬ್ಲೇಜರ್‌ನಲ್ಲಿ ಮಿ ಮಿರ ಮಿಂಚಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನವ ದಂಪತಿಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಒಟ್ಟಿಗೆ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನನ್ಯ ಪಾಂಡೆ, ಸಂಜಯ್ ಕಪೂರ್ ಮತ್ತವರ ಪತ್ನಿ ಮಹೀಪ್ ಕಪೂರ್, ಬಾಬಿ ಡಿಯೋಲ್, ನುಶ್ರತ್ ಭರುಚ್ಚಾ, ಗೌರಿ ಖಾನ್, ಆರ್ಯನ್ ಖಾನ್ ಮತ್ತು ಇತರರು ಭಾಗವಹಿಸಿದ್ದರು.
2021ರ ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ವಿಕ್ಕಿ ಮತ್ತು ಕತ್ರಿನಾ ವಿವಾಹ ಆಗಿದ್ದರು. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಇನ್ನೂ ಹೆಸರಿಡ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಮತ್ತು ವಿಕ್ಕಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿಯವರ ಬಹುತಾರಾಗಣದ ಸೂರ್ಯವಂಶಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಕತ್ರಿನಾ, ಸಲ್ಮಾನ್ ಖಾನ್ ಅವರ ಟೈಗರ್ 3 ಮೂಲಕ ತೆರೆಗೆ ಬರಲಿದ್ದಾರೆ.
ಇದನ್ನೂ ಓದಿ: ಏನೋ ಸಮಸ್ಯೆಯಿದೆ ಎನಿಸುತ್ತಿದೆ: ಟ್ರೋಲಿಗರ ಟಾರ್ಗೆಟ್ ಆದ ಬಚ್ಚನ್ ಕುಟುಂಬ