ETV Bharat / sitara

'ನಿಮ್ಮ ಫೋನ್​ ರೂಮಲ್ಲೇ ಬಿಟ್ಟು ಬನ್ನಿ' ವಿಕ್ಕಿ-ಕತ್ರಿನಾ ಕೈಫ್​​ ಮದುವೆ ಅತಿಥಿಗಳಿಗೆ ಸೂಚನೆ.. ಸ್ವಾಗತ ಪತ್ರಿಕೆ ವೈರಲ್​ - ವಿಕ್ಕಿ ಕೌಶಲ್​ ಕತ್ರಿನಾ ಮದುವೆ ಸಮಾರಂಭ

ಸೆಲೆಬ್ರಿಟಿ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಜಸ್ಥಾನದಲ್ಲಿ ಇಂದಿನಿಂದ ಶುರುವಾಗಿದೆ. ಇದರ ಮಧ್ಯೆ ಮದುವೆಯ ಆಯೋಜಕರು ನೀಡಿದ ಸ್ವಾಗತ ಪತ್ರಿಕೆ ಮತ್ತು ಅದರಲ್ಲಿನ ಕುತೂಹಲಕಾರಿ ಸೂಚನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

vicky katrina
ಸ್ವಾಗತ ಪತ್ರಿಕೆ ವೈರಲ್​
author img

By

Published : Dec 7, 2021, 10:37 PM IST

ಜೈಪುರ (ರಾಜಸ್ಥಾನ): ಸೆಲೆಬ್ರಿಟಿ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಜಸ್ಥಾನದಲ್ಲಿ ಇಂದಿನಿಂದ ಶುರುವಾಗಿದೆ. ಇದರ ಮಧ್ಯೆ ಮದುವೆಯ ಆಯೋಜಕರು ನೀಡಿದ ಸ್ವಾಗತ ಪತ್ರಿಕೆ ಮತ್ತು ಅದರಲ್ಲಿನ ಕುತೂಹಲಕಾರಿ ಸೂಚನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

'ನೀವು ಅಂತಿಮವಾಗಿ ಇಲ್ಲಿಗೆ ಬಂದಿದ್ದೀರಿ. ಜೈಪುರದಿಂದ ರಣಥಂಬೋರ್​ವರೆಗಿನ ರಸ್ತೆ ಪ್ರವಾಸವನ್ನು ನೀವು ಆನಂದಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಾವು ಮಾಡಿದ ಉಪಹಾರವನ್ನು ಸೇವಿಸಿ ಆನಂದಿಸಿ. ವಿಶ್ರಾಂತಿ ಪಡೆದುಕೊಳ್ಳಿ, ಆನಂದವನ್ನು ಸವಿಯಿರಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೇ, ದಯವಿಟ್ಟು ನಿಮ್ಮ ಮೊಬೈಲ್ ಫೋನ್‌ಗಳನ್ನು ನಿಮ್ಮ ಕೊಠಡಿಗಳಲ್ಲಿ ಬಿಟ್ಟು ಬನ್ನಿ. ಮದುವೆ ಸಮಾರಂಭದ ಯಾವುದೇ ಚಿತ್ರ, ವಿಡಿಯೋಗಳನ್ನು ಸೆರೆ ಹಿಡಿಯಬೇಡಿ. ಅಲ್ಲದೇ, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬೇಡಿ. ನೀವು ಇದನ್ನು ಮಾಡದಂತೆ ಕಾಯಲಾಗುವುದಿಲ್ಲ ಎಂದು ಬರೆಯಲಾಗಿದೆ. ಈ ಸ್ವಾಗತ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈರಲ್​ ಆದ ಸ್ವಾಗತ ಪತ್ರಿಕೆ
ವೈರಲ್​ ಆದ ಸ್ವಾಗತ ಪತ್ರಿಕೆ

ಮೊನ್ನೆಯಷ್ಟೇ ವಿಕ್ಕಿ-ಕತ್ರಿನಾ ಮದುವೆ ಸ್ಥಳದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಇಂದು ಶುರುವಾದ ಮದುವೆ ಶಾಸ್ತ್ರದ ವಿಡಿಯೋ ಕೂಡ ಹರಿಬಿಡಲಾಗಿತ್ತು. ಇದರಿಂದ ಎಚ್ಚೆತ್ತ ಆಯೋಜನಕರು ಸುತ್ತೋಲೆ ರೀತಿಯ ಸೂಚನಾ ಪ್ರತಿಯನ್ನು ಅತಿಥಿಗಳಿಗೆ ನೀಡಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.