ETV Bharat / sitara

ಅಭಿಷೇಕ್ ಕಪೂರ್ ಮುಂದಿನ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಆಯುಷ್ಮಾನ್ ಖುರಾನಾ, ವಾಣಿ ಕಪೂರ್ - ಆಯುಷ್ಮಾನ್ ಖುರಾನಾ

ಅಭಿಷೇಕ್ ಕಪೂರ್ ಅವರ ಮುಂಬರುವ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ನಟಿಸಲಿದ್ದಾರೆ. ಚಿತ್ರದಲ್ಲಿ ಇವರಿಬ್ಬರೂ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ayushman and vani
ayushman and vani
author img

By

Published : Aug 7, 2020, 9:37 AM IST

ಮುಂಬೈ: ಅಭಿಷೇಕ್ ಕಪೂರ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ನಟಿಸಲಿದ್ದಾರೆ.

ಇನ್ನೂ ಹೆಸರಿಡಬೇಕಾದ ಈ ಸಿನಿಮಾವನ್ನು "ಸುಂದರವಾದ, ಹೃದಯವನ್ನು ತುಂಬುವ ಚಿತ್ರ" ಎಂದು ವಿವರಿಸಿದ ವಾಣಿ, ಆಯುಷ್ಮಾನ್​ನೊಂದಿಗೆ ನಟಿಸಲು ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ.

"ಆಯುಷ್ಮಾನ್ ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದಾರೆ. ಈ ಸುಂದರವಾದ ಪ್ರೇಮಕಥೆಯ ಚಿತ್ರದಲ್ಲಿ ನಾವಿಬ್ಬರು ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದರಿಂದ ಚಿತ್ರದ ಕುರಿತು ರೋಮಾಂಚನಗೊಂಡಿದ್ದೇನೆ" ಎಂದಿದ್ದಾರೆ.

"ನಿರ್ದೇಶಕ ಅಭಿಷೇಕ್ ಕಪೂರ್​ನೊಂದಿಗೆ ಕೆಲಸ ಮಾಡಲು ನಾನು ಯಾವಾಗಲೂ ಬಯಸುತ್ತಿದ್ದೆ. ಅವರ ಚಿತ್ರಗಳಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ" ಎಂದು ವಾಣಿ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಆಯುಷ್ಮಾನ್ ಕ್ರಾಸ್-ಫಂಕ್ಷನಲ್ ಅಥ್ಲೀಟ್ ಆಗಿ ನಟಿಸಲಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.