ನವದೆಹಲಿ: ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗದಿರುವುದು ನನ್ನ ದುರಾದೃಷ್ಟ ಎಂದು ಆಸ್ಕರ್ ಮತ್ತು ಗ್ರ್ಯಾಮಿ ವಿಜೇತ ಎ.ಆರ್. ರೆಹಮಾನ್ ಹೇಳಿದ್ದಾರೆ.
"ಈ ಸಮಯದಲ್ಲಿ ಯಾರೂ ಅವರ ಅಂತ್ಯಕ್ರಿಯೆಗೆ ಹೋಗಲು ಸಾಧ್ಯವಾಗದಿದ್ದದ್ದು ತುಂಬಾ ದುರದೃಷ್ಟಕರ." ಎಂದು ರೆಹಮಾನ್ ಹೇಳಿದರು.
"ಅವರು ಜನರಿಗೆ ಎಷ್ಟೊಂದು ಮನರಂಜನೆ ನೀಡಿದ್ದರು, ಆದರೆ ಅವರ ಅವರ ಅಂತ್ಯಕ್ರಿಯೆಯಲ್ಲಿ ಜನ ಭಾಗಿಯಾಗಲು ಸಾಧ್ಯವಾಗಲಿಲ್ಲ" ಎಂದರು.