ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಹಿಂದಿ ಚಲನಚಿತ್ರೋದ್ಯಮದಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ತಾನೂ ಕೂಡ ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದು ಬಂದವನು. ಸುಶಾಂತ್ ಸಾವಿಗೆ ಚಿತ್ರರಂಗದ ಯಾರೊಬ್ಬರನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚಿನ ಸಂದರ್ಶನವೊಂದರಲ್ಲಿ ಸುಶಾಂತ್ ಸಾವಿನ ಕುರಿತು ಮಾತನಾಡುವಾಗ, ಸೋನು ಅವರು ನಟನಾಗಲು ಹೆಣಗಾಡುತ್ತಿದ್ದ ಸಮಯವನ್ನು ನೆನಪಿಸಿಕೊಂಡರು. ನೀವು ಎಷ್ಟೇ ಪ್ರತಿಭಾವಂತರಾಗಿದ್ದರೂ ಉದ್ಯಮದಲ್ಲಿ ನಿಮ್ಮ ಚಾಪು ಮೂಡಿಸುವುದು ತುಂಬಾ ಕಷ್ಟ.
ಚಿತ್ರರಂಗದಲ್ಲಿ ಹೊರಗಿನವರು ಮತ್ತು ಉದ್ಯಮದಲ್ಲಿ ನಂಟು ಇಲ್ಲದವರು ಈ ರಂಗದಲ್ಲಿ ಯಶಸ್ಸು ಗಳಿಸಿದ ಉದಾಹರಣೆಗಳು ಕಡಿಮೆ ಎಂದು ಒತ್ತಿ ಹೇಳಿದ್ದಾರೆ.