ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಮರೆಯುವ ಮುನ್ನವೇ ಹಿಂದಿ ಕಿರುತೆರೆಗೆ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಬರಸಿಡಿಲು ಬಡಿದಂತಾಗಿದೆ. ಹಿಂದಿ ಕಿರುತೆರೆ ನಟ ಸಮೀರ್ ಶರ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ.
- " class="align-text-top noRightClick twitterSection" data="
">
44 ವರ್ಷದ ಸಮೀರ್ ಶರ್ಮ, ನಿನ್ನೆ ಮುಂಬೈನ ಪಶ್ಚಿಮ ಮಲಾಡ್ನ ತಮ್ಮ ನೇಹಾ ಸಿಹೆಚ್ಎಸ್ ಅಪಾರ್ಟ್ಮೆಂಟ್ನ ಅಡುಗೆ ಮನೆಯ ಸೀಲಿಂಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗಿದೆ. ಹಿಂದಿ ಕಿರುತೆರೆಯ 'ಯೇ ರಿಶ್ತಾ ಹೆ ಪ್ಯಾರ್ ಕೆ' ಧಾರಾವಾಹಿಯಲ್ಲಿ ಕುಹೂ ತಂದೆ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದರು. ನಿನ್ನೆ ರಾತ್ರಿ ಅಡುಗೆ ಮನೆಯ ಸೀಲಿಂಗ್ನಲ್ಲಿ ಸಮೀರ್ ಶರ್ಮ ದೇಹ ನೇತಾಡುತ್ತಿದ್ದನ್ನು ಕಂಡ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್, ಅಪಾರ್ಟ್ಮೆಂಟ್ ಮೇಲ್ವಿಚಾರಕನಿಗೆ ಕರೆ ಮಾಡಿದ್ದಾರೆ. ನಂತರ ಆತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸಮೀರ್ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
- View this post on Instagram
@bleedingsoulpoetry @societyofpoetry #bleedingsoulpoetry. Photo by Samir Sharma.
">
ಕಹಾನಿ ಘರ್ ಘರ್ ಕಿ, ಕ್ಯುಕಿ ಸಾಸ್ ಭಿ ಕಭಿ ಬಹು ಥಿ, ಜ್ಯೋತಿ, ಇಸ್ ಪ್ಯಾರ್ ಕೊ ಕ್ಯಾ ನಾಮ್ ದು ಸೇರಿ ಅನೇಕ ಧಾರಾವಾಹಿಗಳಲ್ಲಿ ಸಮೀರ್ ಶರ್ಮ ನಟಿಸಿದ್ದಾರೆ. ವಿಪರ್ಯಾಸ ಎಂದರೆ ಜುಲೈ 27 ರಂದು ಸಮೀರ್ ಶರ್ಮ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಾವೇ ಬರೆದ ಕವಿತೆಯೊಂದನ್ನು ಪೋಸ್ಟ್ ಮಾಡಿ ಅದಕ್ಕೆ #bleedingsoulpoetry ಎಂದು ಕ್ಯಾಪ್ಷನ್ ನೀಡಿದ್ದರು.
ಸುಶಾಂತ್ ಸಿಂಗ್, ಸುಶಾಂತ್ ಮ್ಯಾನೇಜರ್ ದಿಶಾ, ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ, ಮನ್ಮೀತ್ ಗ್ರೆವಲ್ ಅಗಲಿಕೆಯಿಂದ ಬೇಸರದಲ್ಲಿದ್ದ ಹಿಂದಿ ಕಿರುತೆರೆಗೆ ಇದೀಗ ಸಮೀರ್ ಶರ್ಮ ಅವರ ಆತ್ಮಹತ್ಯೆ ವಿಚಾರ ಮತ್ತಷ್ಟು ಶಾಕ್ ನೀಡಿದೆ. ಸಮೀರ್ ಶರ್ಮ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.