ETV Bharat / sitara

ಅಮಿರ್​ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ ನಟಿ ಕರೀನಾ - 2021ರ ಕ್ರಿಸ್​ಮಸ್​​

ನಟಿ ಕರೀನಾ ಕಪೂರ್ ಸದ್ಯ ಕೊರೊನಾ ಬಳಿಕ ಮತ್ತೆ ಶೂಟಿಂಗ್​​ನಲ್ಲಿ ಭಾಗಿಯಾಗಿ ಅಮಿರ್ ಖಾನ್ ನಟನೆಯ ಲಾಲ್​​ ಸಿಂಗ್ ಚಡ್ಡಾ ಸಿನಿಮಾದ ತಮ್ಮ ಭಾಗದ ಶೂಟಿಂಗ್ ಪೂರ್ಣಗೊಳಿದ್ದಾರೆ. ಆಗಸ್ಟ್​ನಲ್ಲಿ 2ನೇ ಬಾರಿ ಗರ್ಭಿಣಿಯಾಗಿರುವುದರ ಕುರಿತು ಘೋಷಿಸಿಕೊಂಡಿದ್ದ ನಟಿ ಬಳಿಕ ಚಿತ್ರೀಕರಣದಲ್ಲಿ ಎಂದಿನಂತೆ ಭಾಗಿಯಾಗಿದ್ದರು.

Actress Kareena Kapoor with Aamir Khan
ಅಮಿರ್​ ಖಾನ್ ಜೊತೆ ನಟಿ ಕರೀನಾ ಕಪೂರ್​
author img

By

Published : Oct 15, 2020, 5:35 PM IST

ಮುಂಬೈ: ಅಲ್​ಲಾಕ್ ಬಳಿಕ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಅಮಿರ್ ಖಾನ್ ನಟನೆಯ ಲಾಲ್​ ಸಿಂಗ್ ಚಡ್ಡಾ ಸಹ ಚಿತ್ರೀಕರಣದಲ್ಲಿ ತೊಡಗಿದೆ. ಈ ನಡುವೆ ಚಡ್ಡಾ ಸಿನಿಮಾದಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಸಿರುವುದಾಗಿ ನಟಿ ಕರೀನಾ ಕಪೂರ್ ಖಾನ್ ತಿಳಿಸಿದ್ದಾರೆ.

1994ರಲ್ಲಿ ಬಿಡುಗಡೆಯಾಗಿದ್ದ ಥೋಮ್ ಹ್ಯಾಂಕ್ಸ್​ ನಟನೆಯ ಫಾರೆಸ್ಟ್ ಗಂಪ್​​ ಚಿತ್ರದ ರಿಮೇಕ್ ಆಗಿರುವ ಲಾಲ್​ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮಿರ್ ಖಾನ್​ ನಟಿಸುತ್ತಿದ್ದು, ಕರೀನಾ ಸಹ ಕಾಣಿಸಿಕೊಂಡಿದ್ದಾರೆ.

ಕರೀನಾ ಆಗಸ್ಟ್​ನಲ್ಲಿ ತಾನು 2ನೇ ಬಾರಿ ಗರ್ಭಿಣಿಯಾಗಿರುವುದನ್ನು ಘೋಷಿಸಿಕೊಂಡ ಬಳಿಕವೂ ಚಿತ್ರದ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. 40 ವರ್ಷದ ನಟಿ ಈ ಕುರಿತು ತನ್ನ ಇನ್ಸ್​​ಸ್ಟಾಗ್ರಾಮ್​​ನಲ್ಲಿ ಅಮಿರ್​​ ಖಾನ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

ಅಲ್ಲದೆ ಈ ಕುರಿತು ‘ಇಂದು ಲಾಲ್​ ಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ, ಕಠಿಣ ಸಮಯಗಳು, ಗರ್ಭಿಣಿ, ಕೊರೊನಾ ವೈರಸ್ ಎಲ್ಲವೂ ಒಟ್ಟಿಗೆ, ಖಂಡಿತವಾಗಿಯೂ ಎಲ್ಲಾ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದೆವು. ಸಿನಿಮಾ ಕುರಿತ ನಮ್ಮ ಉತ್ಸಾಹವನ್ನು ತಡೆಯಲೂ ಸಾಧ್ಯವೇ ಇಲ್ಲ’ ಎಂದು ಬರೆದುಕೊಂಡಿದ್ದರು.

ಇದಲ್ಲದೆ ಕರೀನಾ ಚಿತ್ರದ ಸಹ ನಟರು ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಂದು ಅದ್ಭುತ ತಂಡಕ್ಕೆ ಧನ್ಯವಾದಗಳು, ನಾವು ಮತ್ತೆ ದಾರಿಯನ್ನು ಮುಗಿಸಿದ್ದೇವೆ ಎಂದಿದ್ದಾರೆ.

ಸದ್ಯ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದ್ದು, ಮುಂದಿನ 2021ರ ಕ್ರಿಸ್​ಮಸ್​​ಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮತ್ತು ಮೋನಾ ಸಿಂಗ್ ಸಹ ನಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.