ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಟೈಗರ್ ಶ್ರಾಫ್ ಹಿಂದಿ ಚಿತ್ರರಂಗದ ಅತ್ಯುತ್ತಮ ನೃತ್ಯಗಾರರಲ್ಲೊಬ್ಬರು. ಡ್ಯಾನ್ಸ್ ಎಕ್ಸ್ಪರ್ಟ್ ಜೊತೆಗೆ ಆ್ಯಕ್ಷನ್ ಸ್ಟಾರ್ ಅಂತಾನೇ ಫೇಮಸ್. ಅವರ ಇತ್ತೀಚಿನ ರೀಲ್ ಒಂದು ಸಖತ್ ವೈರಲ್ ಆಗಿದ್ದು, ಕೊರಿಯನ್ ಮ್ಯೂಸಿಕ್ಗೆ ನಯವಾಗಿ ಸ್ಟೆಪ್ಸ್ ಹಾಕಿರೋದನ್ನು ಕಾಣಬಹುದಾಗಿದೆ. ಕೊರಿಯನ್ ಪಾಪ್ ಬ್ಯಾಂಡ್ ಆಗಿರುವ ಬಿಟಿಎಸ್ ಮ್ಯೂಸಿಕ್ಗೆ ಟೈಗರ್ ಶ್ರಾಫ್ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ.
- " class="align-text-top noRightClick twitterSection" data="
">
ಟೈಗರ್ ಶ್ರಾಫ್ ಇತ್ತೀಚೆಗಷ್ಟೇ ಅವರ ಮುಂಬರುವ ಚಿತ್ರ ಹೀರೋಪಂತಿ 2ನ ಕೊನೆಯ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ನಟ ತಮ್ಮ ಗುರು ನೃತ್ಯ ನಿರ್ದೇಶಕ ಪರೇಶ್ ಶಿರೋಡ್ಕರ್ ಅವರೊಂದಿಗೆ ಹೆಜ್ಜೆ ಹಾಕಲು ಸಮಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Watch.. ಗಾಯಕ ಮಿಕಾ ಸಿಂಗ್ ಅವರ ಹೊಸ ಹಾಡು 'ಮಜುನು' ಬಿಡುಗಡೆ
ಟೈಗರ್ ಶ್ರಾಫ್ ಇಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ರೀಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪರೇಶ್ ಮತ್ತು ಟೈಗರ್ ಕೊರಿಯನ್ ಮ್ಯೂಸಿಕ್ಗೆ ನಯವಾಗಿ ಹೆಜ್ಜೆ ಹಾಕಿರೋದನ್ನು ಕಾಣಬಹುದಾಗಿದೆ.