ETV Bharat / sitara

ಆನ್​ಲೈನ್​ನಲ್ಲಿ ಲೀಕ್​ ಆಯ್ತು 'ಟೈಗರ್​ 3' ಸಿನಿಮಾದ ಸಲ್ಮಾನ್​ ಖಾನ್​​ ಲುಕ್​..

2012ರಲ್ಲಿ ಕಬೀರ್ ಖಾನ್ ನಿರ್ದೇಶನದ 'ಏಕ್ ಥಾ ಟೈಗರ್' ಹಾಗೂ 2017ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು..

Salman Khan
Salman Khan
author img

By

Published : Aug 22, 2021, 5:36 PM IST

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ರಷ್ಯಾದಲ್ಲಿ ತಮ್ಮ ಮುಂಬರುವ 'ಟೈಗರ್ 3' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಚಿತ್ರದಲ್ಲಿನ ಸಲ್ಮಾನ್​ ಖಾನ್​​ ಲುಕ್ ಮಾತ್ರ ಸೋಷಿಯಲ್​ ಮೀಡಿಯಾಗಳಲ್ಲಿ ಲೀಕ್​ ಆಗಿದೆ.

'salmanic_aryan' ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 'ಟೈಗರ್ 3' ಸಿನಿಮಾ ಶೂಟಿಂಗ್​ ವೇಳೆಯಲ್ಲಿ ಕ್ಲಿಕ್ಕಿಸಲಾದ ಫೋಟೋವೊಂದನ್ನು ಶೇರ್ ಮಾಡಲಾಗಿದೆ. ಈ ಫೋಟೋದಲ್ಲಿ ನಟ ಸಲ್ಮಾನ್ ಖಾನ್ ಜೀನ್ಸ್​, ಬಿಳಿ ಟೀ ಶರ್ಟ್ ಮೇಲೆ ಕೆಂಪು ಜಾಕೆಟ್ ಹಾಗೂ ಕೆಂಪು ಬಣ್ಣದ ಹೆಡ್ ಬ್ಯಾಂಡ್ ಧರಿಸಿರುವುದು, ಕಂದು ಬಣ್ಣದ ಉದ್ದನೆಯ ಗಡ್ಡ ಬಿಟ್ಟಿರುವುದು ಕಂಡು ಬಂದಿದೆ. ತಮ್ಮ ನೆಚ್ಚಿನ ನಟನ ಹೊಸ ಗೆಟ್‌ಅಪ್‌ ಕಂಡ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಇದನ್ನೂ ಓದಿ: ಟೈಗರ್ 3 ಚಿತ್ರೀಕರಣಕ್ಕೆ ಸಲ್ಮಾನ್ ಜೊತೆ ರಷ್ಯಾಕ್ಕೆ ಹಾರಿದ ಕತ್ರಿನಾ

ಟೈಗರ್​ 3, ಇದು ಮನೀಶ್ ಶರ್ಮಾ ನಿರ್ದೇಶನದ ಸಿನಿಮಾ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿದ್ದಾರೆ. 2012ರಲ್ಲಿ ಕಬೀರ್ ಖಾನ್ ನಿರ್ದೇಶನದ 'ಏಕ್ ಥಾ ಟೈಗರ್' ಹಾಗೂ 2017ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಸ್ಪೈ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಭಾಗವಾಗಿ 'ಟೈಗರ್​ 3' ತೆರೆ ಮೇಲೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.