ETV Bharat / sitara

’’ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ’‘: ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ನಟಿ ರಿಯಾ! - Rhea Chakraborty

ಬಾಲಿವುಡ್​ ನಟ ಸುಶಾಂತ್​​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಇದರ ಬೆನ್ನಲ್ಲೇ ತನಗೆ ಬೆದರಿಕೆ ಇದೆ ಎಂದು ನಟ ರಿಯಾ ಚಕ್ರವರ್ತಿ ಪೊಲೀಸರ ಮೊರೆ ಹೋಗಿದ್ದಾರೆ.

Rhea Chakraborty
Rhea Chakraborty
author img

By

Published : Aug 27, 2020, 3:40 PM IST

ಮುಂಬೈ: ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಇದೀಗ ಪೊಲೀಸರ ರಕ್ಷಣೆ ಕೋರಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ.

ನಾನು ಹಾಗೂ ನನ್ನ ತಂದೆ ವಾಸವಾಗಿರುವ ನಿವಾಸದ ಹೊರಗೆ ಮಾಧ್ಯಮದವರು ದಾಂಧಲೆ ನಡೆಸಿದ್ದಾರೆ ಎಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​ ಮಾಡಿರುವ ನಟಿ, ನನ್ನ ತಂದೆ ಹಾಗೂ ಸೆಕ್ಯೂರಿಟಿ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.

ನನಗೂ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ ಇದೆ. ಈಗಾಗಲೇ ನಾನು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೆ ರಕ್ಷಣೆ ನೀಡಿಲ್ಲ. ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳಿಗೂ ಇದರ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

ನನ್ನ ಮಗನನ್ನು ಕೊಲೆ ಮಾಡಿದ್ದು ರಿಯಾ: ಸುಶಾಂತ್​ ತಂದೆ ಆರೋಪ

ಕಳೆದ ಜೂನ್​ 14ರಂದು ಆತ್ಮಹತ್ಯೆಗೆ ಶರಣಾಗಿರುವ ನನ್ನ ಮಗನನ್ನು ರಿಯಾ ಚಕ್ರವರ್ತಿ ಕೊಲೆ ಮಾಡಿದ್ದು, ಆಕೆಯನ್ನ ತಕ್ಷಣವೇ ಬಂಧಿಸುವಂತೆ ನಟ ಸುಶಾಂತ್​ ಸಿಂಗ್​​ ರಜಪೂತ್​ ತಂದೆ ಕೆ.ಕೆ ಸಿಂಗ್​ ಆಗ್ರಹಿಸಿದ್ದಾರೆ. ರಿಯಾ ಚಕ್ರವರ್ತಿ ನನ್ನ ಮಗನಿಗೆ ವಿಷ ಉಣಿಸಿ ಕೊಲೆ ಮಾಡಿದ್ದು, ಆಕೆಯ ಜತೆ ಆಕೆಯ ಸಹಚರರನ್ನು ಬಂಧನ ಮಾಡಬೇಕು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.