ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ನಿಧನದ ಸುಮಾರು ಎರಡು ತಿಂಗಳ ಬಳಿಕ, ಅವರ ಪತ್ನಿ ಸುತಾಪಾ ಸಿಕ್ದಾರ್ ಅವರು ಭಾನುವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅರಳುತ್ತಿರುವ ಕಮಲಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಖಾನ್ ಆ ಹೂವುಗಳನ್ನು ಹೇಗೆ ಪೋಷಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸುತಾಪಾ ಅವರು ಹೂ ಬಿಡುವ ಕಮಲಗಳ ಚಿತ್ರವನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಇರ್ಫಾನ್ ಖಾನ್ ಅವುಗಳನ್ನು ಬಾಟಲಿಗಳಲ್ಲಿ ತಂದು ಯಾವ ರೀತಿ ಕೆಸರಿಗೆ ಹಾಕಿ ಬೆಳಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
"ಕಮಲದ ಹೂಗಳು ನಿಮ್ಮನ್ನು ನೆನಪಿಸಿಕೊಳ್ಳುತ್ತಿವೆ. ನೀವು ಅವುಗಳನ್ನು ಬಾಟಲಿಗಳಲ್ಲಿ ತಂದು ಬೆಳೆಸಲು ತುಂಬಾ ಕಷ್ಟಪಟ್ಟಿದ್ದೀರಿ. # ರೈನ್ಸ್ # ನೇಚರ್ಲವ್ # ಯುನಿನ್ಯೂವರ್ಸಿಸೋನ್" ಎಂಬ ಶೀರ್ಷಿಕೆಯಲ್ಲಿ ಅವರು ಬರೆದಿದ್ದಾರೆ.
ಖ್ಯಾತ ನಟ ಇರ್ಫಾನ್ ಖಾನ್ ಏಪ್ರಿಲ್‌ನಲ್ಲಿ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅಪರೂಪದ ರೀತಿಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಿಧನರಾದರು.