ಎರ್ನಾಕುಲಂ: ಹಣ ಪಡೆದು ಉದ್ಘಾಟನಾ ಸಮಾರಂಭಕ್ಕೆ ಹಾಜರಾಗದ ಆರೋಪದಡಿ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ಧ ಕೇರಳ ಅಪರಾಧ ವಿಭಾಗ ಪ್ರಕರಣ ದಾಖಲಿಸಿದೆ.
ಆರ್. ಶಿಯಾಸ್ ಎಂಬ ಆಯೋಜಕರೊಬ್ಬರು ಕಾರ್ಯಕ್ರಮವೊಂದನ್ನು ನಡೆಸಿಕೊಡುವಂತೆ ಸನ್ನಿ ಲಿಯೋನ್ಗೆ ಕೇಳಿದ್ದರು. ಇದಕ್ಕೆ ಒಪ್ಪಿದ್ದ ನಟಿ ಅವರಿಂದ ಮುಂಗಡವಾಗಿ 29 ಲಕ್ಷ ರೂ. ಕೂಡ ಪಡೆದಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಸನ್ನಿ ಲಿಯೋನ್ಗೆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದರ ವಿರುದ್ಧ ಶಿಯಾಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಸನ್ನಿ ಲಿಯೋನ್ ವಿರುದ್ಧ ವಂಚನೆ ಆರೋಪ; ಹೇಳಿಕೆ ದಾಖಲಿಸಿದ ಪೊಲೀಸ್
ದೂರಿನನ್ವಯ ನಿನ್ನೆ ತಿರುವನಂತಪುರಂನ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಇಂದು ಹಣ ವಂಚನೆ ಮತ್ತು ದುರುಪಯೋಗ ಆರೋಪದಡಿ ಸನ್ನಿ ಲಿಯೋನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿರುವನಂತಪುರಂ ಅಪರಾಧ ವಿಭಾಗದ ಡಿವೈಎಸ್ಪಿ ಸಂಜೀವ್ ಅವರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ.
ಇತ್ತ ನಟಿ ಹಾಗೂ ಸನ್ ಸಿಟಿ ಮೀಡಿಯಾದ ಪ್ರತಿನಿಧಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.