ETV Bharat / sitara

ಫರ್ಹಾನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರೇಯಸಿ.. ಐ ಲವ್ ಯೂ ಎಂದ ನಟ.. - ಫರ್ಹಾನ್ ಅಖ್ತರ್ ಹುಟ್ಟು ಹಬ್ಬೠ

ಈ ಪೋಸ್ಟ್​​​​ಗೆ ಉತ್ತರಿಸಿರುವ ಫರ್ಹಾನ್​​​, ಕಮೆಂಟ್ ಬಾಕ್ಸ್​​ನಲ್ಲಿ ‘ಐ ಲವ್​ ಯೂ’ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಪೋಸ್ಟ್​ಗಳು ನೆಟ್ಟಿಗರ ಗಮನ ಸೆಳೆದಿದ್ದು, ಫರ್ಹಾನ್​ ಹಾಗೂ ಶಿಬಾನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದಕ್ಕೂ ಮೊದಲು ವಿವಾಹವಾಗಿರುವ ಫರ್ಹಾನ್​ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ..

Farhan Akhtar and Shibani
ಫರ್ಹಾನ್ ಅಖ್ತರ್​ ಮತ್ತು ಪ್ರೇಯಸಿ ಶಿಬಾನಿ
author img

By

Published : Jan 9, 2021, 6:08 PM IST

ಹೈದರಾಬಾದ್ : ಬಾಲಿವುಡ್ ಖ್ಯಾತ ನಟ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಇಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ಅಂಗಳದಿಂದ ಸಾವಿರಾರು ಮಂದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, ಪ್ರೀತಿಯಿಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇದಲ್ಲದೆ ಫರ್ಹಾನ್ ಪ್ರೇಯಸಿ ಶಿಬಾನಿ ದಾಡೇಕರ್ ತನ್ನ ಇನ್ಸ್​​​ಸ್ಟಾಗ್ರಾಮ್​​ನಲ್ಲಿ ಹಾಕಿರುವ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದ್ದು, ನೆಟ್ಟಿಗರ ದೃಷ್ಟಿ ಬಿದ್ದಿದೆ. ಕೆಲವು ವರ್ಷಗಳಿಂದ ಫರ್ಹಾನ್ ಜೊತೆ ಡೇಟಿಂಗ್​​​ನಲ್ಲರುವ ಶಿಬಾನಿ ತನ್ನ ಇನ್ಸ್​​ಸ್ಟಾಗ್ರಾಮ್​​ನಲ್ಲಿ, ಮೊದಲಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

‘ನನ್ನ ಜೀವನದ ಪ್ರೀತಿಗೆ, ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಲೂಡೋ ಜೊತೆಗಾರ, ನೀನಿಲ್ಲದೆ ಈ ಪಯಣದಲ್ಲಿ ಹೇಗಿರಲಿ ಎಂಬುದು ತಿಳಿದಿಲ್ಲ. ನೀವು ನನ್ನ ಕೈ ಹಿಡಿದು ಬೆನ್ನ ಹಿಂದೆ ನಿಂತು ಮುನ್ನಡೆಸಿದ್ದೀರಿ. ನನಗೆ ತಿಳಿದಿರುವ ಅತ್ಯಂತ ನಂಬಲಾರ್ಹ ವ್ಯಕ್ತಿ, ನನ್ನವನಾಗಿರುವುದಕ್ಕೆ ಧನ್ಯವಾದಗಳು, ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​​​ಗೆ ಉತ್ತರಿಸಿರುವ ಫರ್ಹಾನ್​​​, ಕಮೆಂಟ್ ಬಾಕ್ಸ್​​ನಲ್ಲಿ ‘ಐ ಲವ್​ ಯೂ’ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಪೋಸ್ಟ್​ಗಳು ನೆಟ್ಟಿಗರ ಗಮನ ಸೆಳೆದಿದ್ದು, ಫರ್ಹಾನ್​ ಹಾಗೂ ಶಿಬಾನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದಕ್ಕೂ ಮೊದಲು ವಿವಾಹವಾಗಿರುವ ಫರ್ಹಾನ್​ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಶಿಬಾನಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಕ್ರಂ ವೇದ ರಿಮೇಕ್‌ನಿಂದ ಅಮೀರ್ ಖಾನ್ ಹಿಂದೆ ಸರಿದಿದ್ದಕ್ಕೆ ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.