ದೇಶದಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸಿನಿಮಾ ಥಿಯೇಟರ್ಗಳು ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಯಿತು. ಈಗ ಲಾಕ್ಡೌನ್ ಸಡಿಲಿಕೆ ಆಗಿದ್ದರೂ ಇನ್ನೂ ಚಿತ್ರೀಕರಣ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ.
- " class="align-text-top noRightClick twitterSection" data="">
ಈ ನಡುವೆ ಬಿಡುಗಡೆಗೆ ಸಿದ್ಧವಾಗಿದ್ದ ಬಹುತೇಕ ಚಿತ್ರಗಳು ಒಟಿಟಿ ಫ್ಲಾಟ್ಫಾರ್ಮ್ ಪಾಲಾಗಿವೆ. ಕನ್ನಡದಲ್ಲಿ ಕೂಡಾ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ ಅಡಿ ತಯಾರಾದ ಎರಡು ಸಿನಿಮಾಗಳನ್ನು ಒಟಿಟಿ ಪ್ಲಾಟ್ಫಾರ್ಮ್ ಖರೀದಿಸಿತ್ತು. ಇದೀಗ ಬಹುನಿರೀಕ್ಷಿತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಜೀವನಚರಿತ್ರೆಯನ್ನೊಳಗೊಂಡ ಕಂಗನಾ ರಣಾವತ್ ಅಭಿನಯದ 'ತಲೈವಿ' ಸಿನಿಮಾ ಕೂಡಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಕಂಗನಾ ರಣಾವತ್, 'ಥಿಯೇಟರ್ನಲ್ಲಿ ಅಥವಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುವುದು ಆ ಚಿತ್ರದ ಕಥೆ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ 'ಮಣಿಕರ್ಣಿಕಾ', 'ಪಂಗಾ', 'ಜಡ್ಜ್ಮೆಂಟಲ್ ಹೈ ಕ್ಯಾ' ನಂತ ಸಿನಿಮಾಗಳು ಡಿಜಿಟಲ್ ಫ್ರೆಂಡ್ಲಿ. ಈ ಸಿನಿಮಾಗಳು ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡಗೆಯಾದರೆ ತೊಂದರೆಯಿಲ್ಲ. ಈ ಚಿತ್ರದಿಂದ ನಿರ್ಮಾಪಕರಿಗೆ ಸಾಕಷ್ಟು ಲಾಭವಾಗಿದೆ. ಆದರೆ ತಲೈವಿ ಕೇವಲ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಮಾತ್ರ ಬಿಡುಗಡೆಯಾಗಬೇಕಾದಂತ ಸಿನಿಮಾವಲ್ಲ. ಇದು ಎಲ್ಲರೂ ನೋಡುವಂತ ಸಿನಿಮಾ' ಎಂದಿದ್ದಾರೆ.
'ತಲೈವಿ' ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ತಯಾರಾದ ಸಿನಿಮಾ. ಈ ಚಿತ್ರ ಈಗಾಗಲೇ ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಂ ಎರಡಕ್ಕೂ ಸುಮಾರು 55 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಜ ಏನು ಎಂಬುದು ತಿಳಿಯಲಿದೆ. ಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಕಂಗನಾ ರಣಾವತ್, ಜಯಲಲಿತಾ ಪಾತ್ರ ನಿಭಾಯಿಸಿದ್ದಾರೆ.