ಲಂಡನ್: ಐಎಫ್‌ಪಿಐ ಗ್ಲೋಬಲ್ ರೆಕಾರ್ಡಿಂಗ್ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿಗೆ ಟೇಲರ್ ಸ್ವಿಫ್ಟ್ ಎರಡನೇ ಬಾರಿಗೆ ಭಾಜನರಾಗಿದ್ದಾರೆ. 2014 ರಲ್ಲಿ ಈ ಪ್ರಶಸ್ತಿ ಪಡೆದಿದ್ದ ಬಿಲ್ಲಿ ಎಲಿಶ್ ಮತ್ತು ಕ್ವೀನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.
2019 ರಲ್ಲಿ ಟೇಲರ್ ಸ್ವಿಫ್ಟ್ ಅವರ ಹಾಡುಗಳು ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾಗಿವೆ. ಐಎಫ್‌ಪಿಐ ಜಾಗತಿಕವಾಗಿ ರೆಕಾರ್ಡಿಂಗ್ ಸಂಗೀತ ಉದ್ಯಮವನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಟೇಲರ್ ಎರಡನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ವಿಫ್ಟ್ ಅವರು ತಮ್ಮ ಏಳನೇ ಸ್ಟುಡಿಯೋ ಆಲ್ಬಂ 'ಲವರ್'ನನ್ನು ಆಗಸ್ಟ್ನಲ್ಲಿ ಬಿಡುಗಡೆ ಮಾಡಿದ್ರು. ಇದು ಒಂದು ವಾರದೊಳಗೆ ಮೂರು ಮಿಲಿಯನ್ಗೂ ಹೆಚ್ಚು ಮಾರಾಟವಾಗಿತ್ತು. ಸುಮಾರು 10 ಕ್ಕೂ ಹೆಚ್ಚು ದೇಶಗಳಲ್ಲಿ ಈ ಆಲ್ಬಂ ಪ್ರಥಮ ಸ್ಥಾನ ಪಡೆದಿದೆ.
ಎಡ್ ಶೀರನ್ ಅವರು ಸಂಸ್ಥೆಯ ಅಗ್ರ 10 ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. "ಸನ್ಫ್ಲವರ್" ಮತ್ತು "ಹಾಲಿವುಡ್ ಬ್ಲೀಡಿಂಗ್" ಆಲ್ಬಂನ ಮಾರಾಟದ ನಂತರ ಪೋಸ್ಟ್ ಮ್ಯಾಲೋನ್ ಮೂರನೇ ಸ್ಥಾನದಲ್ಲಿದ್ದ, ಬಿಲ್ಲಿ ಎಲಿಶ್ ಮತ್ತು ಕ್ವೀನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.
2019 ರ ಐಎಫ್‌ಪಿಐ ಟಾಪ್ 10 ಗ್ಲೋಬಲ್ ರೆಕಾರ್ಡಿಂಗ್ ಕಲಾವಿದರು:
1. ಟೇಲರ್ ಸ್ವಿಫ್ಟ್
2. ಎಡ್ ಶೀರನ್
3. ಪೋಸ್ಟ್ ಮ್ಯಾಲೋನ್
4. ಬಿಲ್ಲಿ ಎಲಿಶ್
5. ಕ್ವೀನ್
6. ಅರಿಯಾನ ಗ್ರಾಂಡೆ
7. ಬಿಟಿಎಸ್
8. ಡ್ರೇಕ್
9. ಲೇಡಿ ಗಾಗಾ
10. ದ ಬೀಟಲ್ಸ್