ಮುಂಬೈ: ತೆರಿಗೆ ವಂಚನೆ ಆರೋಪದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಇದೀಗ, ಐಟಿ ಪರಿಶೀಲನೆ ಮುಗಿದ ಬಳಿಕ ಇಬ್ಬರೂ ಶೂಟಿಂಗ್ನಲ್ಲಿ ಪಾಲ್ಗೊಂಡು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಮನ್ಮಾರ್ಜಿಯಾನ್ ಸಿನಿಮಾದ ನಂತರ ತಾಪ್ಸಿ ಇದೀಗ ಕಶ್ಯಪ್ ನಿರ್ದೇಶನದ ದೋಬಾರಾ ಚಿತ್ರದ ಮೂಲಕ ಮತ್ತೆ ಒಟ್ಟಾಗಿದ್ದಾರೆ. ಚಿತ್ರದ ಚಿತ್ರೀಕರಣವು ಫೆಬ್ರವರಿಯಲ್ಲಿ ಆರಂಭವಾಗಿದ್ದು, ಕೇವಲ 23 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ನಡುವೆ ತಾಪ್ಸಿ ಚಿತ್ರತಂಡದೊಂದಿಗೆ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ತಾಪ್ಸಿ ಮಾತನಾಡಿ, ದೋಬಾರಾ ಸಿನಿಮಾ ಕಷ್ಯಶ್ ನಿರ್ದೇಶನದ ಉತ್ತಮ ಸಿನಿಮಾವಾಗಿದೆ. ಅವರ ಎಲ್ಲಾ ಚಿತ್ರಕ್ಕಿಂತ ಭಿನ್ನವಾದ ಕಥಾ ಹಂದರ ಹೊಂದಿದೆ. ಈ ಸಿನಿಮಾವನ್ನು ಕೇವಲ 23 ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಓದಿ: 'ಮುಂಬೈಯ್ಕರ್' ಸಿನಿಮಾದ ತಮ್ಮ ಫಸ್ಟ್ಲುಕ್ ಬಿಡುಗಡೆ ಮಾಡಿದ ವಿಜಯ್ ಸೇತುಪತಿ
ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಕಪೂರ್, ಸುನೀರ್ ಖೇತರ್ಪಾಲ್ ಮತ್ತು ಗೌರವ್ ಬೋಸ್ ನಿರ್ಮಿಸಿದ್ದಾರೆ.