ಹೈದರಾಬಾದ್: ಬಾಲಿವುಟ್ ನಟಿ ಸ್ವರ ಭಾಸ್ಕರ್ ಹಾಗೂ ನಟಿ ಶಿಖಾ ತಲ್ಸಾನಿಯಾ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವ ಸುಸಂದರ್ಭ ಕೂಡಿ ಬಂದಿದೆ.
ಫ್ರೆಂಡ್ಶಿಪ್ ಡ್ರಾಮಾ ಚಿತ್ರವಾಗಿರುವ ‘ಜಹಾನ್ ಚಾರ್ ಯಾರ್’ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರು 2018ರಲ್ಲಿ ತೆರೆಕಂಡ ‘ವೀರ್ ದಿ ವೆಡ್ಡಿಂಗ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಜಹಾನ್ ಚಾರ್ ಯಾರ್’ ನಲ್ಲಿ ನಟಿಸುವುದು ಖಚಿತವಾಗಿದೆ.
ಇವರಲ್ಲದೇ ಚಿತ್ರದಲ್ಲಿ ಮೆಹರ್ ವಿಜ್ ಮತ್ತು ಪೂಜಾ ಚೋಪ್ರಾ ಸಹ ಲೀಡ್ ರೋಲ್ನಲ್ಲಿ ಬಣ್ಣ ಹಚ್ಚಲಿದ್ದಾರೆ.
ಈ ಚಿತ್ರವೂ ಉತ್ತರ ಪ್ರದೇಶದ ಮಧ್ಯಮ ವರ್ಗ ಕುಟುಂಬದ ನಾಲ್ವರು ಸ್ನೇಹಿತರ ನಡುವಿನ ಕಥಾ ಹಂದರ ಹೊಂದಿದೆ. ಅವರ ದೈನಂದಿನ ಜೀವನ ಇದರಲ್ಲಿದ್ದು, ಅವರ ಗೋವಾ ಟ್ರಿಪ್ನಲ್ಲಿ ಏನಾಗಲಿದೆ ಎಂಬುದೇ ಚಿತ್ರದ ಎಳೆಯಾಗಿದೆ.
ಚಿತ್ರಕ್ಕೆ ಮೊದಲ ಬಾರಿಗೆ ಬರಹಗಾರ ಕಮಲ್ ಪಾಂಡೆ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಇದಕ್ಕೂ ಮೊದಲು ‘ಶಾದಿ ಮೇ ಜರೂರ್ ಆನಾ’ ಸಾಹೇಬ್ ಬಿವಿ ಔರ್ ಗ್ಯಾಂಗ್ಸ್ಟರ್, ಶಾಗ್ರಿದ್ ಮತ್ತು ಶಕ್ತಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
ಇದನ್ನೂ ಓದಿ: 'ಏಕ್ ವಿಲನ್ ರಿಟರ್ನ್ಸ್' ಶೂಟಿಂಗ್ ಆರಂಭ: ಮಾಹಿತಿ ಹಂಚಿಕೊಂಡ ದಿಶಾ ಪಟಾನಿ