ETV Bharat / sitara

ಹೃತಿಕ್ ರೋಷನ್ ಮಾಜಿ ಪತ್ನಿಗೆ ಒಮಿಕ್ರಾನ್​​.. ಹಿಂದಿ ಚಿತ್ರರಂಗದ ಮತ್ತಿಬ್ಬರಿಗೆ ಅಂಟಿದ ಕೊರೊನಾ! - ನಟ ವೀರ್ ದಾಸ್ ಕೊರೊನಾ ನ್ಯೂಸ್

ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್​ ಖಾನ್ ಅವರಿಗೆ ಒಮಿಕ್ರಾನ್​ ತಗುಲಿದ್ದರೆ, ನಟ ವೀರ್ ದಾಸ್ ಮತ್ತು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಅವರಿಗೆ​ ಕೋವಿಡ್​​ ತಗುಲಿರುವುದು ದೃಢಪಟ್ಟಿದೆ.

corona for Bollywood celebrities
ಬಾಲಿವುಡ್ ಸೆಲೆಬ್ರಿಟಿಗಳಿಗೆ​ ಕೊರೊನಾ
author img

By

Published : Jan 11, 2022, 2:07 PM IST

Updated : Jan 11, 2022, 2:16 PM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್​ ಚಿತ್ರರಂಗದಲ್ಲಿ ಕೋವಿಡ್​ ಸ್ಫೋಟವಾಗಿದೆ. ಹೃತಿಕ್ ರೋಷನ್ ಅವರ ಮಾಜಿ ಪತ್ನಿ, ಇಂಟೀರಿಯರ್ ಡಿಸೈನರ್ ಸುಸೇನ್​ ಖಾನ್, ನಟ ವೀರ್ ದಾಸ್ ಮತ್ತು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಅವರಿಗೆ​ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸುಸೇನ್​ ಖಾನ್ ತಮಗೆ ಒಮಿಕ್ರಾನ್​​ ತಗುಲಿರುವುದಾಗಿ ಇನ್​​ಸ್ಟಾಗ್ರಾಮ್​ನಲ್ಲಿ ತಿಳಿಸಿದ್ದಾರೆ. ಕೋವಿಡ್​ ಅಬ್ಬರ ಆರಂಭಗೊಂಡು 2 ವರ್ಷಗಳ ನಂತರ ನನಗೆ ಒಮಿಕ್ರಾನ್​ ತಗುಲಿದೆ. ಕಳೆದ ರಾತ್ರಿ ಪಾಸಿಟಿವ್​ ವರದಿ ಬಂದಿದೆ. ದಯವಿಟ್ಟು ಸುರಕ್ಷಿತವಾಗಿರಿ ಮನವಿ ಮಾಡಿದ್ದಾರೆ.

ಹಾಸ್ಯ ನಟ ವೀರ್ ದಾಸ್ ಅವರಿಗೆ ಕೋವಿಡ್​ ಸೋಂಕು ತಗುಲಿದೆ. ಸೋಮವಾರ ರಾತ್ರಿ ಪಾಸಿಟಿವ್​ ವರದಿ ಬಂದಿದ್ದು, ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದೇನೆಂದು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕೊರೊನಾ; ಐಸಿಯುಗೆ ದಾಖಲು

ಇನ್ನೂ ಬೋನಿ ಕಪೂರ್ ಪುತ್ರಿ, ಜಾನ್ವಿ ಕಪೂರ್ ಅವರ ಸಹೋದರಿ ಖುಷಿ ಕಪೂರ್ ಅವರಿಗೂ ಕೊರೊನಾ ಅಂಟಿದೆ ಎಂದು ತಿಳಿದು ಬಂದಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಸದ್ಯ ಹೋಮ್​ ಕ್ವಾರಂಟೈನ್​ ಆಗಿದ್ದು, ಸಹೋದರಿ ಜಾನ್ವಿ ಕಪೂರ್​ ಮತ್ತು ಬೋನಿ ಕಪೂರ್​ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

Last Updated : Jan 11, 2022, 2:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.