ETV Bharat / sitara

ನಟ ಸುಶಾಂತ್​ ಸಾವಿನ ಸುದ್ದಿ ನೋಡಿ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕ..! - ಹಾಪುರದಲ್ಲಿ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕ

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಾಲು ಸಾಲು ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದೀಗ ಉತ್ತರ ಪ್ರದೇಶದ ಬಾಲ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಸಾವಿನಿಂದ ನೊಂದು ನೇಣಿಗೆ ಶರಣಾಗಿದ್ದಾನೆ.

Sushant Singh Rajput's 12-year-old fan ends life in UP
ನಟ ಸುಶಾಂತ್​ ಸಾವಿನ ಸುದ್ದಿ ನೋಡಿ ಆತ್ಮಹತ್ಯೆಗೆ ಶರಣಾದ ಬಾಲಕ
author img

By

Published : Jun 22, 2020, 5:58 PM IST

ಹಾಪುರ : ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನೋಡಿ 12 ವರ್ಷದ ಬಾಕಲನೋರ್ವ ಸುಶಾಂತ್​ ಸಾವಿಗೀಡಾದ ರೀತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.

ಆರನೇ ತರಗತಿಯ ವಿದ್ಯಾರ್ಥಿ ನಟ ಸುಶಾಂತ್​ ಆತ್ಮಹತ್ಯೆಯ ಸುದ್ದಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಾ ಅದರಲ್ಲೇ ಮಗ್ನನಾಗಿದ್ದ, ಏಕಾ ಏಕಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕುಟುಂಬದ ಕೋರಿಕೆಯ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸರ್ವೇಶ್ ಮಿಶ್ರಾ ತಿಳಿಸಿದ್ದಾರೆ.

ಬಾಲಕ ಆತ್ಮಹತ್ಯೆಗೆ ಶರಣಾಗಲು ಬೇರೆ ಯಾವುದೇ ಕಾರಣಗಳಿಲ್ಲ. ಟಿವಿಯಲ್ಲಿ ಸುಶಾಂತ್​ ಸಾವಿನ ಸುದ್ದಿ ನೋಡಿ ಈ ರೀತಿ ಮಾಡಿಕೊಂಡಿರಬಹುದು. ಆದ್ದರಿಂದ ಇಂತಹ ಅಸ್ವಸ್ಥ ಸುದ್ದಿಗಳಿಂದ ಮಕ್ಕಳನ್ನು ದೂರವಿಡಿ ಎಂದು ಪೊಲೀಸ್​ ಅಧಿಕಾರಿ ಎಲ್ಲಾ ಪೋಷಕರಿಗೆ ಮನವಿ ಮಾಡಿದ್ದಾರೆ.

ನೇಣು ಬಿಗಿದುಕೊಂಡು ಸಾಯುವ ಮೊದಲು, ಹುಡುಗ ಡೆತ್​ ನೋಟ್​ ಬರೆದಿಟ್ಟಿದ್ದಾನೆ, ಅದರಲ್ಲಿ "ಅವನು ಅದನ್ನು ಮಾಡಲು ಸಾಧ್ಯವಾದರೆ, ನಾನು ಯಾಕೆ ಸಾಧ್ಯವಿಲ್ಲ" ಎಂದು ಬರೆದಿದ್ದಾನೆ.

ತನ್ನ ನೆಚ್ಚಿನ ನಟನ ಅಗಲಿಕೆಯಿಂದ ನೊಂದ ಬರೇಲಿಯ 10 ನೇ ತರಗತಿಯ ವಿದ್ಯಾರ್ಥಿ ಜೂನ್ 16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕಿಂತ ಮೊದಲು ಓಡಿಶಾದಲ್ಲಿ ಬಾಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ​ ಜೂನ್ 17 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ನಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಸಾವಿನ ಬಗ್ಗೆ ಯಾವುದೇ ಡೆತ್​ ನೋಟ್​ ಸಿಕ್ಕಿಲ್ಲ, ಈತನೂ ಸುಶಾಂತ್​ ಸಾವಿನಿಂದ ಪ್ರೇರೇಪಿತನಾಗಿ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.