ETV Bharat / sitara

ದುರಂತ ನಾಯಕ ಸುಶಾಂತ್​ ತಂದೆಯಿಂದ ಮಾಹಿತಿ ಪಡೆದ ಮುಂಬೈ ಪೊಲೀಸರು; ಅವರಿಗೂ ಅದೇ ಪ್ರಶ್ನೆ! - ಬಾಲಿವುಡ್​ ನಟನ ಆತ್ಮಹತ್ಯೆ ಪ್ರಕರಣ

ಬಾಲಿವುಡ್​ ನಟರನ್ನು ದುಃಖದ ದವಡೆಗೆ ತಳ್ಳಿದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಇದೀಗ ತನಿಖೆ ಹಂತದಲ್ಲಿದೆ. ಇಂದು ಮುಂಬೈ ಪೊಲೀಸರು ಮೃತ ನಟನ ತಂದೆಯ ಹೇಳಿಕೆಯನ್ನು ಪಡೆದುಕೊಳ್ಳುವ ಮೂಲಕ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

sushant singh rajput father gives statement to mumbai
ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ (ಸಂಗ್ರಹ ಚಿತ್ರ)
author img

By

Published : Jun 17, 2020, 10:23 PM IST

ಮುಂಬೈ: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಆತ್ಮಹತ್ಯೆ ನೋವಿನಿಂದ ಹೊರಬರಲಾದ ಪೋಷಕರು ತಮ್ಮ ಮಗ ತೆಗೆದುಕೊಂಡ ದುರಂತ ನಿರ್ಧಾರದ ಬಗ್ಗೆ ಮುಂಬೈ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಭಾರದ ಮನಸ್ಸಿನಿಂದ ಇಂದು ಮುಂಬೈಗೆ ಬಂದ ಮೃತ ನಟನ ತಂದೆ ಕೆ.ಕೆ.ಸಿಂಗ್, ಸುಶಾಂತ್ ತೆಗೆದುಕೊಂಡ ನಿರ್ಧಾರ ಬಗ್ಗೆ ವಿವಿರಣೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಪೊಲೀಸರು ಈ ಬಗ್ಗೆ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಸೋಮವಾರ ಪಾಟ್ನಾದಿಂದ ಮುಂಬೈಗೆ ಬಂದ ಕೆ.ಕೆ.ಸಿಂಗ್ ಹಾಗೂ ಮೃತನ ಸಹೋದರಿಯರು, ಸುಶಾಂತ್ ಖಿನ್ನತೆಗೊಳಗಾಗಿದ್ದಾನೆ ಅನ್ನೋದು ನಮಗೆ ಗೊತ್ತೇ ಇರಲಿಲ್ಲ. ಚಿಕಿತ್ಸೆ ಪಡೆಯುತ್ತಿರುವುದಾಗಲಿ, ಈ ಬಗ್ಗೆ ಔಷಧಿಯನ್ನು ತೆಗೆದುಕೊಳ್ಳುತ್ತಿರುವುದಾಗಲಿ ಯಾವೂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈ ಅಧಿಕೃತ ಹೇಳಿಕೆಯನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನು ಕುಟುಂಬ ಸದಸ್ಯರ ಮೇಲೆ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿರುವ ಪೊಲೀಸರು ಈ ಬಗ್ಗೆ ಇನ್ನು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.