ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಮಾಜಿ ಮ್ಯಾನೇಜರ್ ಶ್ರುತಿ ಮೋದಿ ಶುಕ್ರವಾರ ಮುಂಬೈ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಆದರೆ ಇಂದು ಮತ್ತೆ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ.
ರಿಯಾ ಚಕ್ರವರ್ತಿ ಕೂಡಾ ತಮ್ಮ ವಿರುದ್ಧ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸಹೋದರ ಶೌಮಿಕ್ ಚಕ್ರವರ್ತಿ ಅವರೊಂದಿಗೆ ಹಾಜರಾಗಿದ್ದರು. ಇದೀಗ ಶ್ರುತಿ ಮೋದಿ ಅವರನ್ನು ಇಡಿ ಮತ್ತೆ ವಿಚಾರಣೆಗೆ ಕರೆದಿದ್ದು ಶ್ರುತಿ ಕೂಡಾ ಇಡಿ ಎದುರು ಹಾಜರಾಗಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಿಯಾ, ಶೌಮಿಕ್, ಶ್ರುತಿ ಮೋದಿ ಮಾತ್ರವಲ್ಲದೆ ಸುಶಾಂತ್ ಸ್ನೇಹಿತ ಸಿದ್ದಾರ್ಥ್ ಅವರನ್ನು ಕೂಡಾ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿತ್ತು. ಸಿದ್ದಾರ್ಥ್ ತಮ್ಮ ಹೇಳಿಕೆ ನೀಡಿ ಹೊರಡುತ್ತಿದ್ದಂತೆ ಶ್ರುತಿ ಮೋದಿ, ಇಂದು ಬೆಳಗ್ಗೆ ಇಡಿ ಕಾರ್ಯಾಲಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.