ETV Bharat / sitara

ಸುಶಾಂತ್ ಸಿಂಗ್​​ ಆತ್ಮಹತ್ಯೆ ಪ್ರಕರಣ.. ವೈಆರ್​ಎಫ್​ ಸಂಸ್ಥೆಯ ಕಾಸ್ಟಿಂಗ್ ನಿರ್ದೇಶಕನ ವಿಚಾರಣೆ - ಕಾಸ್ಟಿಂಗ್​ ನಿರ್ದೇಶಕ ಶಾನೋ ಶರ್ಮಾ

ಸುಶಾಂತ್​ ಈಗಾಗಲೇ ಯಶ್ ರಾಜ್ ಫಿಲ್ಮಂ ಬ್ಯಾನರ್​​ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರನೇ ಸಿನಿಮಾ ‘ಪಾನಿ’ಯಲ್ಲಿ ನಟಿಸಬೇಕಿತ್ತು. ಆದರೆ, ವೈಆರ್​ಎಫ್ ಸಂಸ್ಥೆ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿತ್ತು ಎನ್ನಲಾಗಿದೆ..

Sushant Singh Rajput death row: Police interrogate YRF casting director Shanoo Sharma
ಸುಶಾಂತ್ ಸಿಂಗ್​​ ಆತ್ಮಹತ್ಯೆ ಪ್ರಕರಣ: ವೈಆರ್​ಎಫ್​ ಸಂಸ್ಥೆಯ ಕಾಸ್ಟಿಂಗ್ ನಿರ್ದೇಶಕನ ವಿಚಾರಣೆ
author img

By

Published : Jun 27, 2020, 5:44 PM IST

ಮುಂಬೈ: ಯುವ ನಟ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಬಳಿಕ ಮುಂಬೈ ಪೊಲೀಸರು ಅನೇಕರ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಕಾಸ್ಟಿಂಗ್​​​ ನಿರ್ದೇಶಕ ಶಾನೋ ಶರ್ಮಾ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಯಶ್​​ ರಾಜ್​ ಫಿಲ್ಮಂ ಸಂಸ್ಥೆಯಲ್ಲಿ ಕಾಸ್ಟಿಂಗ್​​ ಡೈರೆಕ್ಟರ್ ಆಗಿರುವ ಶಾನೋ ಅವರನ್ನು ಇಲ್ಲಿನ ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಇದಕ್ಕೂ ಮುನ್ನ ಪೊಲೀಸರು ಸುಶಾಂತ್ ಕುಟುಂಬಸ್ಥರು ಅಂದರೆ ತಂದೆ, ಸಹೋದರಿ, ಸ್ನೇಹಿತರು, ಗರ್ಲ್​ಫ್ರೆಂಡ್​​ ಎನ್ನಲಾಗಿದ್ದ ರಿಯಾ ಚಕ್ರಬೊರ್ತಿ ಹಾಗೂ ಸುಶಾಂತ್ ನಟಿಸಬೇಕಿದ್ದ ದಿಲ್​ ಬೆಚಾರ ಸಿನಿಮಾದ ನಿರ್ದೇಶಕ ಮುಖೇಶ್ ಛಾಬ್ರಾ ಸೇರಿ ಒಟ್ಟು 23 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಮುಂಬೈ ಪೊಲೀಸರ ತನಿಖೆಯ ನಡುವೆಯೂ ಸುಶಾಂತ್ ಸಾವಿನ ಕುರಿತಾಗಿ ಬಾಲಿವುಡ್ ನಟ ಶೇಖರ್ ಸುಮನ್​​ #justiceforSushantforum ಎಂಬ ಅಭಿಯಾನವನ್ನೇ ಆರಂಭಿಸಿದ್ದರು. ಅಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಟ್ವಿಟರ್​​​ನಲ್ಲಿ ದೊಡ್ಡ ಕ್ಯಾಂಪೇನ್​ ನಡೆಸಿದ್ದರು.

ಈ ನಡುವೆ ಸುಶಾಂತ್​ ಮರಣೋತ್ತರ ವರದಿಯಲ್ಲಿಯೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ. ಈ ವರದಿಯಲ್ಲಿ ಸಾವಿಗೂ ಮುನ್ನ ಅವರು ಯಾವುದೇ ಕಷ್ಟ ಪಟ್ಟಂತೆ ಕಂಡು ಬಂದಿಲ್ಲ. ಉಗುರುಗಳಲ್ಲಿಯೂ ಏನೂ ಪತ್ತೆಯಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸುಶಾಂತ್​ ಈಗಾಗಲೇ ಯಶ್ ರಾಜ್ ಫಿಲ್ಮಂ ಬ್ಯಾನರ್​​ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರನೇ ಸಿನಿಮಾ ‘ಪಾನಿ’ಯಲ್ಲಿ ನಟಿಸಬೇಕಿತ್ತು. ಆದರೆ, ವೈಆರ್​ಎಫ್ ಸಂಸ್ಥೆ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿತ್ತು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.