ETV Bharat / sitara

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ: ನಟಿ ಕಂಗನಾ ರಣಾವತ್​ಗೂ ಸಮನ್ಸ್​​! - ಕಂಗನಾ ರಣಾವತ್​

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಸಾವಿನ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದೀಗ ಬಾಲಿವುಡ್​ ಕ್ವೀನ್​​ ಕಂಗನಾಗೂ ಮುಂಬೈ ಪೊಲೀಸರಿಂದ ಸಮನ್ಸ್​ ಜಾರಿಯಾಗಿದೆ.

Sushant Singh Death
Sushant Singh Death
author img

By

Published : Jul 24, 2020, 3:26 PM IST

ಮುಂಬೈ: ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್​ ನಟಿ ಕಂಗನಾ ರಣಾವತ್​ಗೂ ಮುಂಬೈ ಪೊಲೀಸರಿಂದ ಸಮನ್ಸ್​ ಜಾರಿಯಾಗಿದೆ.

ಸುಶಾಂತ್ ಆತ್ಮಹತ್ಯೆ ಪ್ರಕರಣ...ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಕಂಗನಾ ರಣಾವತ್

ಜೂನ್​ 14ರಂದು ಆತ್ಮಹತ್ಯೆಗೆ ಶರಣಾಗಿರುವ 34 ವರ್ಷದ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರು ಅನೇಕ ನಟರ ಹೇಳಿಕೆ ಪಡೆದುಕೊಂಡಿದ್ದು, ಇದೀಗ ಬಾಲಿವುಡ್​ ಕ್ವೀನ್​ಗೂ ಪೊಲೀಸರಿಂದ ಸಮನ್ಸ್​ ಜಾರಿಗೊಂಡಿದೆ. ಸದ್ಯ ಹಿಮಾಚಲ ಪ್ರದೇಶದಲ್ಲಿರುವ ನಟಿಗೆ ಬಾಂದ್ರಾ ಪೊಲೀಸ್​ ಠಾಣೆಗೆ ಬಂದು ಹಾಜರಾಗುವಂತೆ ತಿಳಿಸಲಾಗಿದೆ.

ಇದೇ ವಿಷಯಯಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್​ ಪರ ವಕೀಲರು ಮಾಹಿತಿ ನೀಡಿದ್ದು, ಮಾರ್ಚ್​ 17ರಿಂದಲೂ ಕಂಗನಾ ಮನಾಲಿಯಲ್ಲಿದ್ದು, ಪೊಲೀಸ್​ ತಂಡವನ್ನ ಅಲ್ಲಿಗೆ ಕಳುಹಿಸಿ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ವಿಡಿಯೋ ಹರಿಬಿಟ್ಟಿದ್ದ ನಟಿ, ಶುಶಾಂತ್​ ಅವರದ್ದು ಪೂರ್ವ ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.