ಕೊರೊನಾ ಭೀತಿಯಿಂದ ಸಾಮಾನ್ಯ ಜನರು, ಸೆಲಬ್ರಿಟಿಗಳು ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದರೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮಾತ್ರ ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಲಾಸ್ ಏಂಜಲೀಸ್ಗೆ ಹಾರಿದ್ಧಾರೆ.
- " class="align-text-top noRightClick twitterSection" data="
">
2000 ರಿಂದಲೂ ಮುಂಬೈನಲ್ಲಿ ನೆಲೆಸಿರುವ ಸನ್ನಿ ಲಿಯೋನ್ ಲಾಕ್ಡೌನ್ ಆರಂಭವಾದಾಗ ಕೂಡಾ ಮುಂಬೈನಲ್ಲೇ ಇದ್ದರು. ಆದರೆ ನಿನ್ನೆ ವಿಶ್ವ ತಾಯಂದಿರ ದಿನದಂದು ಸನ್ನಿ ಲಿಯೋನ್ ತಮ್ಮ ಮಕ್ಕಳಾದ ನಿಶಾ, ನೋಹಾ ಹಾಗೂ ಅಶೆರ್ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ಧಾರೆ. ಎಲ್ಲರಿಗೂ ಮದರ್ಸ್ ಡೇ ಶುಭ ಕೋರಿ 'ತಾಯಿಯಾಗಿ ನನಗೆ ಏನು ಮಾಡಬೇಕು ಎಂದು ಚೆನ್ನಾಗಿ ತಿಳಿದಿದೆ. ಕಿಲ್ಲರ್ ಕೊರೊನಾ ವೈರಸ್ನಿಂದ ಮಕ್ಕಳು ಸುರಕ್ಷಿತವಾಗಿರುವುದು ನನಗೆ ಮುಖ್ಯ ಆದ್ದರಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಈಗ ಲಾಸ್ ಏಂಜಲೀಸ್ನಲ್ಲಿ ನೆಲೆಸಿರುವ ಸ್ಥಳ ನಮ್ಮ ಮನೆ ಹಾಗೂ ಸೀಕ್ರೇಟ್ ಗಾರ್ಡನ್ನಿಂದ ಬಹಳ ದೂರವಿದೆ, ಮಿಸ್ ಯು ಅಮ್ಮಾ ' ಎಂದು ಸನ್ನಿ ಲಿಯೋನ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಕೂಡಾ ಮೊನ್ನೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸೆಲ್ಫಿ ತೆಗೆದು 'ಲಾಕ್ಡೌನ್ ಪಾರ್ಟ್ 2 ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಯೊಬ್ಬರು ಕೆಎಲ್ಎಂ ರಾಯಲ್ ಡಚ್ ಏರ್ಲೈನ್ಸ್ ಅಥವಾ ಏರ್ ಇಂಡಿಯಾ, ಯಾವ ವಿಮಾನದಲ್ಲಿ ಲಾಸ್ ಏಂಜಲೀಸ್ಗೆ ತೆರಳಿದಿರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವೆಬರ್ ಕೆಎಲ್ಎಂ ಸರ್ಕಾರಿ ವಿಮಾನ ಎಂದು ರಿಪ್ಲೇ ಮಾಡಿದ್ಧಾರೆ.