ETV Bharat / sitara

ಸುಕೃತಿ - ಪ್ರಕೃತಿ ಸಹೋದರಿಯರು, ಪಾಯಲ್‌ ದೇವ್‌ ತ್ರಿಬಲ್‌ ಕಾಂಬಿನೇಷನ್‌ನ ವೆಡ್ಡಿಂಗ್‌ ಹಾಡು ರಿಲೀಸ್‌ - ಗಾಯಕಿ, ಗೀತೆ ಸಂಯೋಜಕಿ ಪಾಯಲ್‌ ದೇವ್‌

ಹಿನ್ನೆಲೆ ಗಾಯಕಿಯರಾದ ಸುಕೃತಿ, ಪ್ರಕೃತಿ ಕಾಕರ್‌ ಸಹೋದರಿಯರು ಹಾಗೂ ಗಾಯಕಿ ಪಾಯಲ್‌ ದೇವ್‌ ಇದೇ ಮೊದಲ ಬಾರಿಗೆ ಒಂದಾಗಿ ನಿರ್ಮಿಸಿರುವ ಸಿಂಗಲ್‌ ಸೈಯಾನ್‌ ಹಾಡು ರಿಲೀಸ್‌ ಆಗಿದೆ. ಹೃದಯಸ್ಪರ್ಶಿ ಪ್ರೇಮ ಕಥೆಯ ಈ ಹಾಡು ಸಂಗೀತ ಕಾರ್ಯಕ್ರಮದಲ್ಲಿ ಮಧು ನೃತ್ಯ ಮಾಡಲು ಹೇಳಿ ಮಾಡಿಸಿದಂತಿದೆ.

Sukriti-Prakriti's wedding track 'Single Saiyaan' comes with heartwarming love story
ಸುಕೃತಿ-ಪ್ರಕೃತಿ ಸಹೋದರು, ಪಾಯಲ್‌ ದೇವ್‌ ತ್ರಿಬಲ್‌ ಕಾಂಬಿನೇಷನ್‌ನ ವೆಡ್ಡಿಂಗ್‌ ಹಾಡು 'ಸಿಂಗಲ್‌ ಸೈಯಾನ್‌' ರಿಲೀಸ್‌
author img

By

Published : Feb 4, 2022, 9:29 AM IST

ಮುಂಬೈ: ಗಾಯಕಿ, ಗೀತೆ ಸಂಯೋಜಕಿ ಪಾಯಲ್‌ ದೇವ್‌, ಹಿನ್ನೆಲೆ ಗಾಯಕಿ ಸುಕೃತಿ ಹಾಗೂ ಪ್ರಕೃತಿ ಕಾಕರ್‌ ಇದೇ ಮೊದಲ ಬಾರಿ ತ್ರಿಬಲ್‌ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ಸಿಂಗಲ್‌ ಸೈಯಾನ್‌' ಹಾಡು ರಿಲೀಸ್‌ ಆಗಿದೆ. ಎಲ್ಲ ನವವಿವಾಹಿತರಿಗಾಗಿ, ಹೃದಯಸ್ಪರ್ಶಿ ಪ್ರೇಮ ಕಥೆ ಹೊಂದಿರುವ ಹಾಡಿನ ವಿಡಿಯೋದಲ್ಲಿ ಅವಳಿ ಮಕ್ಕಳೊಂದಿಗೆ ನಟ ಪಾರ್ಥ್ ಸಮತಾನ್ ನಟಿಸಿದ್ದಾರೆ.

ಹಾಡು ಬಿಡುಗಡೆ ವೇಳೆ ಮಾತನಾಡಿದ ಸುಕೃತಿ, ಪ್ರಕೃತಿ ಕಾಕರ್‌, ಹಾಡಿನ ರಚನೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಖತ್‌ ಎಂಜಾಯ್‌ ಮಾಡಿದ್ದೇವೆ. ವಿಶೇಷವಾಗಿ ಪ್ರತಿಭಾವಂತ ಪಾಯಲ್ ದೇವ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ತಂದಿದ್ದು, ಉತ್ತಮ ವ್ಯಕ್ತಿದ ದೇವ್‌ ಅವರೊಟ್ಟಿಗೆ ಇದು ನಮ್ಮ ಮೊದಲ ಸಹಯೋಗವಾಗಿದೆ ಎಂದು ಹೇಳಿದ್ದಾರೆ.

ನಟ ಪಾರ್ಥ್‌ ಸಮತಾನ್‌ ಅವರೊಂದಿಗೆ ಕೆಲಸ ಮಾಡಿರುವುದು ಸಂತಸ ತಂದಿದೆ. ಹಾಡಿನ ಚಿತ್ರೀಕರಣದಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇವೆ. ವಧು ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಸಿಂಗಲ್‌ ಸೈಯಾನ್‌ ಹಾಡು ಒಂದು ಶುದ್ಧ ಔತಣವಾಗಿದೆ ಎಂದಿದ್ದಾರೆ.

ಇನ್ನೂ ನಟ ಪಾರ್ಥ್‌ ಮಾತನಾಡಿ, ಸಂಗೀತ ಋತುವಿನಲ್ಲಿ ತುಂಬಾ ರೋಮಾಂಚಕ, ಶಕ್ತಿಯುತ ಸಾಮರ್ಥ್ಯ ಹೊಂದಿರುವ ಹಾಡಿನ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. 'ಸಿಂಗಲ್ ಸೈಯಾನ್' ಒಂದು ಆನಂದದಾಯಕ ಹಾಡಾಗಿದ್ದು, ನೃತ್ಯ ಮಾಡಲು ಹೇಳಿ ಮಾಡಿಸಿದಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಕೃತಿ, ಪ್ರಕೃತಿ ಕಾಕರ್‌ ಹಾಗೂ ವಿವೈಆರ್‌ಎಲ್‌ ಒರಿಜಿನಲ್‌ ತಂಡದೊಂದಿಗೆ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಅದ್ಭುತ ಅನುಭವ ನೀಡಿದೆ. ಕಾಕರ್ ಸಹೋದರಿಯರೊಂದಿಗೆ ನಾನು ಮೊದಲ ಬಾರಿಗೆ ಕೆಲಸ ಮಾಡಿದ್ದು, ನಿಜವಾಗಿಯೂ ಸುಂದರವಾದ ಅನುಭವ ಎಂದು ಹೇಳಿದ್ದಾರೆ. 'ಸಿಂಗಲ್ ಸೈಯಾನ್' ಹಾಡು VYRL Originals ನ YouTube ನಲ್ಲಿ ಲಭ್ಯವಿದೆ.

ಇದನ್ನು ಓದಿ:ಇಂದು ರಿಲೀಸ್​ ಆಗಲಿದೆ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಟ್ರೈಲರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.