ETV Bharat / sitara

'ಸೂಸೈಡ್ ಆರ್ ಮರ್ಡರ್'​​​​ ಸುಶಾಂತ್​ ಜೀವನ ಚರಿತ್ರೆಯೇ...ನಿರ್ದೇಶಕರು ಹೇಳೋದೇನು..? - ಸೂಸೈಡ್ ಆರ್ ಮರ್ಡರ್ ನಿರ್ದೇಶಕ ಶಮಿಕ್ ಮೌಲಿಕ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಇದರ ಬಗ್ಗೆ ಪ್ರತಿದಿನ ಚರ್ಚೆ ನಡೆಯುತ್ತಲೇ ಇದೆ. ಇದೀಗ ಶಮಿಕ್ ಮೌಲಿಕ್ 'ಸೂಸೈಡ್ ಆರ್ ಮರ್ಡರ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆ ಮಾಡಲಾಗಿದೆ.

Suicide or Murder
'ಸೂಸೈಡ್ ಆರ್ ಮರ್ಡರ್'​​​​
author img

By

Published : Jul 27, 2020, 4:36 PM IST

ಬಾಲಿವುಡ್ ಚಿತ್ರರಂಗದಲ್ಲಿ ಇಂದಿಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಕೆಲವರು ಇದು ಆತ್ಮಹತ್ಯೆಯಲ್ಲ. ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂಬ ಒತ್ತಾಯ ಕೂಡಾ ಕೇಳಿ ಬರುತ್ತಿದೆ.

ಈ ನಡುವೆ ಸಚಿನ್ ತಿವಾರಿ, 'ಸೂಸೈಡ್ ಆರ್ ಮರ್ಡರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವನ್ನು ಶಮಿಕ್ ಮಲಿಕ್ ನಿರ್ದೇಶಿಸುತ್ತಿದ್ದಾರೆ. ಹೆಸರು ಕೇಳುತ್ತಿದ್ದಂತೆ ಇದು ಸುಶಾಂತ್ ಸಿಂಗ್ ರಜಪೂತ್ ಬಯೋಪಿಕ್ ಆಗಿರಬಹುದಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ನಿರ್ದೇಶಕ ಶಮಿಕ್ ಮೌಲಿಕ್ ಇದನ್ನು ನಿರಾಕರಿಸಿದ್ದಾರೆ.

'ಇದು ಖಂಡಿತ ಬಯೋಪಿಕ್ ಅಲ್ಲ, ಯುವಕ-ಯುವತಿ ಇಬ್ಬರು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಎಷ್ಟೋ ಕನಸುಗಳನ್ನು ಹೊತ್ತು ಬರುತ್ತಾರೆ. ಅದೇ ರೀತಿ ಯಶಸ್ಸನ್ನು ಆನಂದಿಸುತ್ತಾರೆ. ತಮ್ಮ ಗುರಿಯನ್ನು ತಲುಪಬೇಕು ಎನ್ನುವಷ್ಟರಲ್ಲಿ ಕೆಲವರು ಅದನ್ನು ತಡೆಯುತ್ತಾರೆ. ಏಕೆಂದರೆ ಸಮಾಜದ ಉನ್ನತ ಸ್ಥಾನದಲ್ಲಿರುವ ಜನರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲು ಬಯಸುವುದಿಲ್ಲ'. ಇದು ಚಿತ್ರದ ಕಥೆ ಎಂದು ಶಮಿಕ್ ಸ್ಪಷ್ಟಪಡಿಸಿದ್ದಾರೆ.

Suicide or Murder
'ಸೂಸೈಡ್ ಆರ್ ಮರ್ಡರ್'​​​​

'ಸಚಿನ್ ತಿವಾರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಉಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ. ಸಾವು ಯಾವಾಗ, ಯಾವ ರೀತಿ ಬರುತ್ತದೆ ಯಾರಿಗೂ ತಿಳಿದಿಲ್ಲ. ಕೆಲವೊಮ್ಮ ನಿಮ್ಮ ಜೀವನವನ್ನು ನೀವೇ ಕೊನೆ ಮಾಡಿಕೊಳ್ಳುವ ಎಷ್ಟೋ ಘಟನೆಗಳು ಜರುಗುತ್ತವೆ. ಅದರಲ್ಲಿ ಮಾನಸಿಕ ಖಿನ್ನತೆ ಮುಖ್ಯವಾದ ವಿಚಾರ' ಎಂದು ಶಮಿಕ್ ಮೌಲಿಕ್ ಹೇಳಿದ್ದಾರೆ.

ಶಮಿಕ್ ಮೌಲಿಕ್ ಈ ಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದರು. ಕಳೆದ ವಾರ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸಚಿನ್ ತಿವಾರಿಯನ್ನು ನೋಡಿದರೆ ಸುಶಾಂತ್ ಸಿಂಗ್ ರಜ್​ಪೂತ್ ಅವರನ್ನು ನೋಡಿದಂತೆ ಆಗುತ್ತದೆ. ಆದ್ದರಿಂದ ಎಲ್ಲರೂ ಇದು ಸುಶಾಂತ್ ಬಯೋಪಿಕ್ ಇರಬಹುದು ಎಂದು ಶಮಿಕ್ ಅವರನ್ನು ಪ್ರಶ್ನಿಸಿದ್ದರು.

ಸುಶಾಂತ್ ದುರ್ಘಟನೆ ಇಂದಿಗೂ ಎಲ್ಲರ ಮನಸ್ಸಲ್ಲಿ ಹಸಿರಾಗಿದೆ. ಆದ್ದರಿಂದ ಈ ಚಿತ್ರವನ್ನು ಸೆಪ್ಟೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿದ್ದೇನೆ ಎಂದು ಶಮಿಕ್ ಹೇಳಿದ್ದಾರೆ.

'ಈ ಚಿತ್ರದಲ್ಲಿ ಸುಶಾಂತ್​ ಬಗ್ಗೆ ಮಾತ್ರವಲ್ಲ, ಚಿತ್ರರಂಗದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ತೋರಿಸಲಾಗುವದು, ಇಲ್ಲಿಗೆ ಬರಲು ಬಯಸುವವರು ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುವುದು ಎಂಬುದನ್ನು ತಿಳಿಯಬೇಕು. ಇಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಸತ್ಯವನ್ನು ಅವರು ತಿಳಿಯಬೇಕು. ಅಷ್ಟೇ ಅಲ್ಲ, ನೀವು ಯಶಸ್ಸಿನ ತುದಿ ತಲುಪುವಾಗ ಅಲ್ಲಿ ನಿಂತವರನ್ನು ಕೆಳಗೆ ಇಳಿಸಿ ನೀವು ಆ ಸ್ಥಾನದಲ್ಲಿ ನಿಲ್ಲಬಹುದು ಎಂಬ ಕನಸು ನನಸಾಗುವುದು ಅಷ್ಟು ಸುಲಭವಲ್ಲ' ಎಂಬ ವಿಚಾರವನ್ನು ಎಲ್ಲರೂ ತಿಳಿಯಬೇಕಿದೆ. ಆದ್ದರಿಂದ ಈ ಚಿತ್ರದಲ್ಲಿ ಇವೆಲ್ಲಾ ಅಂಶಗಳನ್ನು ತೋರಿಸಲಾಗುವುದು ಎಂದು ಶಮಿಕ್​​​​ ಹೇಳಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಸಿನಿಮಾ ಈ ವರ್ಷ ಡಿಸೆಂಬರ್​ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.