ETV Bharat / sitara

ಯಾವುದೇ ಏಜೆನ್ಸಿ ತನಿಖೆ ನಡೆಸಿದ್ರೂ ಸತ್ಯ ಒಂದೇ: ರಿಯಾ ಚಕ್ರವರ್ತಿ ಪರ ವಕೀಲ - ಸುಶಾಂತ್ ಸಿಂಗ್ ರಜಪೂತ್​ ಆತ್ಮಹತ್ಯೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ತೀರ್ಪು ಹೊರಬಿದ್ದಿದ್ದು, ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

Actor Rhea Chakraborty
Actor Rhea Chakraborty
author img

By

Published : Aug 19, 2020, 3:33 PM IST

ಮುಂಬೈ: ಬಾಲಿವುಡ್​ನ ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಇದೀಗ ಸಿಬಿಐನಿಂದ ತನಿಖೆಗೊಳಪಡಲಿದೆ. ಇದೇ ವಿಚಾರವಾಗಿ ಇಂದು ಸುಪ್ರೀಂಕೋರ್ಟ್​​ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

Actor Rhea Chakraborty
ರಿಯಾ ಚಕ್ರವರ್ತಿ

ಇದೇ ವಿಚಾರವಾಗಿ ರಿಯಾ ಚಕ್ರವರ್ತಿ ವಕೀಲ ಸತೀಶ್ ಮನೇಶಿಂದೆ ಮಾತನಾಡಿದ್ದು, ಸಿಬಿಐ ನಡೆಸುವ ತನಿಖೆಗೊಳಗಾಗಲು ರಿಯಾ ನಟಿ ಸಿದ್ಧರಿದ್ದು, ಯಾವುದೇ ಏಜೆನ್ಸಿ ತನಿಖೆ ನಡೆಸಿದ್ರೂ ಸತ್ಯ ಒಂದೇ ಆಗಿರಲಿದೆ ಎಂದಿದ್ದಾರೆ.

ಸುಶಾಂತ್​ ಸಿಂಗ್ ರಜಪೂತ್​ ಖಾತೆಯಿಂದ ಹಣ ವರ್ಗಾವಣೆ ವಿಚಾರವಾಗಿ ಈಗಾಗಲೇ ರಿಯಾ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಇದೀಗ ಸಿಬಿಐ ಈ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿರುವ ಕಾರಣ ಕೆಲವೇ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್​ ಜಾರಿ ಮಾಡುವ ಸಾಧ್ಯತೆ ಇದೆ.

Actor Rhea Chakraborty
ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ

ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾಗಿರುವ ನಟ ಸುಶಾಂತ್​ ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರದ ನಡುವೆ ಹಗ್ಗ-ಜಗ್ಗಾಟ ಸಹ ನಡೆದಿತ್ತು. ಇದರ ಮಧ್ಯೆ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜತೆಗೆ ಇದಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷಿ, ಮಾಹಿತಿ ಹಾಗೂ ದಾಖಲೆಗಳನ್ನಮುಂಬೈ ಪೊಲೀಸರು ಸಿಬಿಐಗೆ ಹಸ್ತಾಂತರಿಸುವಂತೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.