ETV Bharat / sitara

ಸುಶಾಂತ್​ ಸಿಂಗ್​ ಸಾವಿನ ಪ್ರಕರಣ: ಬಿಜೆಪಿ ನಾಯಕ ಸಲ್ಲಿಸಿದ್ದ ಪಿಐಎಲ್​ ಇಂದು ವಿಚಾರಣೆ - ಏಕೀಕೃತ ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಪಿಐಎಲ್​ ವಿಚಾರಣೆ

ವಿವಿಧ ರಾಜ್ಯಗಳಲ್ಲಿ ಒಂದೇ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆ ಏಕೀಕೃತ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಬಿಜೆಪಿ ಮುಖಂಡ ವಕೀಲ ಅಜಯ್​ ಅಗರ್​ವಾಲ್​ ಸುಪ್ರೀಂ ಕೋರ್ಟ್​ಗೆ ಪಿಐಎಲ್​ ಸಲ್ಲಿಸಿದ್ದರು. ಅದು ಇಂದು ವಿಚಾರಣೆಗೆ ಬರಲಿದೆ.

Sushant singh rajput death case
ಪಿಐಎಲ್​ ಇಂದು ವಿಚಾರಣೆ
author img

By

Published : Aug 13, 2020, 1:53 PM IST

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ 'ಏಕೀಕೃತ' ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಪಿಐಎಲ್​ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.

34ರ ಹರೆಯದ ನಟ ಸುಶಾಂತ್​ ಸಿಂಗ್​ ರಜಪೂತ್, ಜೂನ್ 14 ರಂದು ಮುಂಬೈ ಉಪನಗರ ಬಾಂದ್ರಾದ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದಿನಿಂದ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬಿಹಾರದಲ್ಲಿ ಕೂಡ ಸುಶಾಂತ್​ ಸಹವರ್ತಿಗಳು ದೂರು ದಾಖಲಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಒಂದೇ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆ ಏಕೀಕೃತ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಬಿಜೆಪಿ ಮುಖಂಡರೂ ಆಗಿರುವ ವಕೀಲ ಅಜಯ್​ ಅಗರ್​ವಾಲ್​ ಸುಪ್ರೀಂ ಕೋರ್ಟ್​ಗೆ ಪಿಐಎಲ್​ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ, ಎ.ಎಸ್ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ.

ಈ ಹಿಂದೆ, ಅಲ್ಕಾ ಪ್ರಿಯಾ ಮತ್ತು ಮುಂಬೈ ಮೂಲದ ಕಾನೂನು ವಿದ್ಯಾರ್ಥಿ ದ್ವಿವೇಂದ್ರ ದೇವತಾದೀನ್ ದುಬೆ ಅವರು ಪ್ರಕರಣದ ಉನ್ನತ ತನಿಖೆ ಕೋರಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ನಿಮಗೆ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಕೈ ಹಾಕುವುದು ಬೇಡವೆಂದು ಇಬ್ಬರ ಅರ್ಜಿಯನ್ನು ಜುಲೈ 30 ಮತ್ತು ಆಗಸ್ಟ್​ 7 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಬೋಫೋರ್ಸ್​ ಹಗರಣ ಪ್ರಕರಣದಲ್ಲಿ ವಾದಿಸುತ್ತಿರುವ ವಕೀಲ ಅಜಯ್​ ಅಗರ್​ವಾಲ್​ ಸುಪ್ರೀಂ ಕೋರ್ಟ್​ಗೆ ಈ ಪಿಐಎಲ್​ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.